ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪಠ್ಯ ಪುಸ್ತಕ ಕಾಲಕಾಲಕ್ಕೆ ಬದಲಾಗಬೇಕು: ವೀರೇಂದ್ರ ಹೆಗ್ಗಡೆ (Veerendra Heggade | Dharmasthala | Karnataka V V)
Bookmark and Share Feedback Print
 
ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆ ಹಾಗೂ ವಿದ್ಯಾರ್ಥಿಗಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಶಿಕ್ಷಣ ಪದ್ಧತಿ ಹಾಗೂ ಪಠ್ಯ ಪುಸ್ತಕಗಳು ಕಾಲಕಾಲಕ್ಕೆ ಬದಲಾಗಬೇಕೆಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಸಲಹೆ ನೀಡಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯ ವತಿಯಿಂದ ನೀಡಲ್ಪಟ್ಟ ಗೌರವ ಡಾಕ್ಟರೇಟ್ ಸ್ವೀಕರಿಸಿ ಅವರು ಮಾತನಾಡಿದರು. ಆಧುನಿಕ ಕಾಲಕ್ಕೆ ಬೇಕಾದ ಬದಲಾವಣೆ ಹಾಗೂ ಆಧುನಿಕತೆ ಮಧ್ಯ ಸಮ್ಮಿಲನವಾದರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ತಾವು ಶ್ರೀ ಧರ್ಮಸ್ಥಳ ಸಂಸ್ಥೆಯ ಧರ್ಮಾಧಿಕಾರಿ ಪಟ್ಟ ಸ್ವೀಕರಿಸುವ ಸಂದರ್ಭದಲ್ಲಿ ಕೆಲವೇ ಶಿಕ್ಷಣ ಸಂಸ್ಥೆಗಳಿದ್ದವು. ಪೂರ್ವಜರು ಶಿಕ್ಷಣ ಸಂಸ್ಥೆ ಬೆಳೆಸಲು ನೀಡಿದ ಮಾರ್ಗದರ್ಶನದ ಫಲವಾಗಿ ಶಿಕ್ಷಣ ಸಂಸ್ಥೆಗಳನ್ನು ಬೆಳೆಸುವಲ್ಲಿ ಯಶಸ್ವಿಯಾಗಿದ್ದಾಗಿ ಈ ಸಂದರ್ಭದಲ್ಲಿ ಹೇಳಿದರು.

ವಿದ್ಯಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಧಾರವಾಡದ ಮಣ್ಣಿನ ಗುಣ ಹಾಗೂ ಇಲ್ಲಿನ ಸಂಸ್ಥೆಗಳೇ ಕಾರಣ. ಅಂದು ಪೇಜಾವರ ಶ್ರೀಗಳು ಜನತಾ ಶಿಕ್ಷಣ ಸಂಸ್ಥೆ ನಡೆಸಲು ಸಲಹೆ ನೀಡಿದ್ದನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು. ಆಡಳಿತ ಮಟ್ಟದಲ್ಲಿರುವ ಸಮಸ್ಯೆ ಹಾಗೂ ಯೋಜನೆಗಳ ಬಗ್ಗೆ ಪ್ರಾಧ್ಯಾಪಕರು ವಿದ್ಯಾರ್ಥಿಗಳೊಂದಿಗೆ ಅನುಭವ ಹಂಚಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ ಅವರು, ಪ್ರೊ. ನ. ವಜ್ರಕುಮಾರ ಅವರು ಜೆಎಸ್ಎಸ್ ಶಿಕ್ಷಣ ಸಂಸ್ಥೆಯನ್ನು ಮಾದರಿ ಶಿಕ್ಷಣ ಸಂಸ್ಥೆಯನ್ನಾಗಿಸಿದ್ದಾರೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ