ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಜೆಡಿಎಸ್-ಬಿಜೆಪಿ ಬೆಂಬಲ: ವಿಜಯ್ ಮಲ್ಯ ರಾಜ್ಯಸಭೆಗೆ? (Vijaya malya | BJP | Congress | JDS | Bangalore | Karnataka)
Bookmark and Share Feedback Print
 
ರಾಜ್ಯಸಭೆ ಮತ್ತು ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮುರಿದು ಬಿದ್ದಿದೆ. ಇದೀಗ ರಾಜ್ಯಸಭೆಗೆ ನಾಲ್ಕನೇ ಅಭ್ಯರ್ಥಿಯಾಗಿ ಮದ್ಯದ ದೊರೆ ವಿಜಯ್ ಮಲ್ಯ ಅಖಾಡಕ್ಕೆ ಇಳಿಯುವ ಸಾಧ್ಯತೆ ಇದ್ದು, ಅವರಿಗೆ ಬಿಜೆಪಿ ಮತ್ತು ಜೆಡಿಎಸ್ ಬೆಂಬಲ ನೀಡಲಿದೆ ಎಂದು ಮೂಲವೊಂದು ತಿಳಿಸಿದೆ.

ವಿಧಾನಪರಿಷತ್‌ಗೆ ಗುರುವಾರವೇ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಪರಿಷತ್ತಿನ ಏಳು ಸ್ಥಾನಗಳಿಗೆ ಬಿಜೆಪಿಯ ನಾಲ್ವರು, ಕಾಂಗ್ರೆಸ್ ಹಾಗೂ ಜೆಡಿಎಸ್‌ನ ತಲಾ ಇಬ್ಬರಂತೆ ಒಟ್ಟು ಎಂಟು ಮಂದಿ ಕಣದಲ್ಲಿದ್ದರು. ಏತನ್ಮಧ್ಯೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಗಾಗಿ ಕುಮಾರಸ್ವಾಮಿ ಸಾಕಷ್ಟು ಕಸರತ್ತು ನಡೆಸಿದರು. ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಜೆಡಿಎಸ್ ತನ್ನ ಎರಡನೇ ಅಭ್ಯರ್ಥಿ ಸೂರ್ಯನಾರಾಯಣ ರೆಡ್ಡಿ ಅವರ ನಾಮಪತ್ರ ವಾಪಸ್ ತೆಗೆಸಿದೆ. ಇದರೊಂದಿಗೆ ಕಣದಲ್ಲಿ ಉಳಿದಿರುವ ಏಳು ಮಂದಿ ಅವಿರೋಧವಾಗಿ ಆಯ್ಕೆಯಾದರು.

ಇದೀಗ ಮೈತ್ರಿ ವಿಫಲವಾಗಿರುವ ಹಿನ್ನೆಲೆಯಲ್ಲಿ ರಾಜ್ಯಸಭೆಯ ಚುನಾವಣಾ ಲೆಕ್ಕಚಾರ ತಲೆಕೆಳಗಾಗಿದೆ. ರಾಜ್ಯಸಭೆಯ ಅಭ್ಯರ್ಥಿ ಗೆಲುವು ಸಾಧಿಸಬೇಕಿದ್ದಲ್ಲಿ 50 ಮತಗಳ ಅಗತ್ಯವಿದೆ. ಅದರಂತೆ ಪಕ್ಷಗಳ ಬಲಾ-ಬಲಾ ಆಧಾರದಲ್ಲಿ ಬಿಜೆಪಿ ಇಬ್ಬರನ್ನು, ಕಾಂಗ್ರೆಸ್ ಒಬ್ಬರನ್ನು ಆಯ್ಕೆ ಮಾಡಲು ಸಾಧ್ಯವಿದೆ. ಆದರೆ ಕೇವಲ 27 ಶಾಸಕ ಬಲ ಹೊಂದಿರುವ ಜೆಡಿಎಸ್‌ಗೆ ಯಾರನ್ನೂ ಅಧಿಕೃತವಾಗಿ ಆಯ್ಕೆ ಮಾಡುವಷ್ಟು ಸಂಖ್ಯಾಬಲ ಇಲ್ಲದಿದ್ದ ಕಾರಣ ಅದು ನಾಲ್ಕನೆ ಅಭ್ಯರ್ಥಿಗೆ ಬೆಂಬಲ ನೀಡಬೇಕಾಗಿರುವುದು ಅನಿವಾರ್ಯ, ಹಾಗಾಗಿ ಜೆಡಿಎಸ್ ಮತ್ತು ಬಿಜೆಪಿಯಲ್ಲಿ ಹೆಚ್ಚುವರಿ ಉಳಿಯುವ ಮತಗಳಿಂದ ವಿಜಯ್ ಮಲ್ಯ ಅವರನ್ನು ಬೆಂಬಲಿಸಲು ಮುಂದಾಗಿವೆ. ಏತನ್ಮಧ್ಯೆ ಕಾಂಗ್ರೆಸ್ ನಿಲುವು ನಿಗೂಢವಾಗಿದೆ.

ಮೈತ್ರಿಗೆ ತೊಡಗಾಗಿರುವುದು ಬಿ.ಕೆ.ಹರಿಪ್ರಸಾದ್: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಲಿ ಸದಸ್ಯ ಬಿ.ಕೆ.ಹರಿಪ್ರಸಾದ್ ಹಾಗೂ ಆಸ್ಕರ್ ಫರ್ನಾಂಡಿಸ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿತ್ತು. ಆದರೆ ಹರಿಪ್ರಸಾದ್ ಅವರು ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದರಿಂದ ಜೆಡಿಎಸ್ ಅವರಿಗೆ ಬೆಂಬಲ ನೀಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪಟ್ಟು ಹಿಡಿದಿದ್ದರು. ಹರಿಪ್ರಸಾದ್ ಅಖಾಡದಲ್ಲಿದ್ದರೆ ಮೈತ್ರಿಗೆ ಒಪ್ಪಲು ಸಾಧ್ಯವಿಲ್ಲ ಎಂದಿದ್ದರು. ಆದರೆ ಆಸ್ಕರ್ ಫರ್ನಾಂಡಿಸ್ ಅವರನ್ನು ಮೊದಲ ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತೇವೆ ಅವರಿಗಾದರೂ ಬೆಂಬಲ ನೀಡಿ ಎಂದು ಕಾಂಗ್ರೆಸ್ ಹೈಕಮಾಂಡ್ ಕೋರಿತ್ತು ಎನ್ನಲಾಗಿದೆ. ಆದರೆ ಕುಮಾರಸ್ವಾಮಿ ಅದ್ಯಾವುದಕ್ಕೂ ಒಪ್ಪದ ಪರಿಣಾಮ ಮೈತ್ರಿ ಮುರಿದು ಬಿದ್ದಿದೆ.
ಸಂಬಂಧಿತ ಮಾಹಿತಿ ಹುಡುಕಿ