ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕೋರ್ಟ್ ಆದೇಶ: ರಾಮನಗರ ಜೈಲಿನಿಂದ ನಿತ್ಯಾನಂದ ಬಿಡುಗಡೆ (Nithyananda | Ranjitha | Bidadi | CID | High court | Rama nagar)
Bookmark and Share Feedback Print
 
PTI
ರಾಸಲೀಲೆ ಪ್ರಕರಣದಲ್ಲಿ ಜೈಲುಕಂಬಿ ಎಣಿಸುತ್ತಿದ್ದ ನಿತ್ಯಾನಂದ ಸ್ವಾಮಿಗೆ ಶನಿವಾರ ರಾಮನಗರ ಜಿಲ್ಲಾ ನ್ಯಾಯಾಲಯ ಬಿಡುಗಡೆಗೆ ಸಮ್ಮತಿ ನೀಡುವ ಮೂಲಕ ಸ್ವಾಮಿಯ 53ದಿನಗಳ ಜೈಲುವಾಸ ಅಂತ್ಯಕಂಡಂತಾಗಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ನಿತ್ಯಾನಂದ ಸ್ವಾಮಿಯ ಶ್ಯೂರಿಟಿಯನ್ನು ಪರಿಶೀಲಿಸಿದ ರಾಮನಗರ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು, ನಿತ್ಯಾನಂದರನ್ನು ಬಿಡುಗಡೆ ಮಾಡುವಂತೆ ಜೈಲರ್‌ಗೆ ಆದೇಶ ಪತ್ರ ರವಾನಿಸಿದ್ದರು. ಆ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದ ಪ್ರತಿಯನ್ನು ಜೈಲರ್ ಅವರಿಗೆ ತಲುಪಿಸಿ, ಅಗತ್ಯ ದಾಖಲೆಗಳಿಗೆ ಸಹಿ ಹಾಕಿ ತಕ್ಷಣವೇ ಬಿಡುಗಡೆಗೊಳಿಸಿದರು.

ಜೈಲಿನಿಂದ ನಗುಮುಖದಿಂದಲೇ ಹೊರಬಂದ ನಿತ್ಯಾನಂದ ಸ್ವಾಮಿ ಎಂದಿನ ಭಂಗಿಯಂತೆ ಕೈಮುಗಿದು ಕಾರನ್ನು ಏರಿ ಬಿಡದಿ ಆಶ್ರಮಕ್ಕೆ ತೆರಳಿದರು. ಆದರೆ ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ಮಾತನಾಡಿಸಲು ಪ್ರಯತ್ನಪಟ್ಟರಾದರೂ ಕೂಡ ಅದಕ್ಕೆ ಅವಕಾಶ ಕೊಡದ ಶಿಷ್ಯರು ನಿತ್ಯಾನಂದರನ್ನು ನೇರವಾಗಿ ಕಾರಿನೊಳಗೆ ಕೂರಿಸಿ ಆಶ್ರಮದತ್ತ ತೆರಳಿದರು.

ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಹೈಕೋರ್ಟ್ ಏಕಸದಸ್ಯ ಪೀಠ ಷರತ್ತುಬದ್ದ ಜಾಮೀನು ನೀಡಿತ್ತು. ಸ್ವಾಮಿಯ ಜಾಮೀನು ಅರ್ಜಿಯನ್ನು ಮಾನ್ಯ ಮಾಡಿದ ನ್ಯಾ.ಸುಭಾಷ್ ಬಿ.ಅಡಿ ಅವರಿದ್ದ ಏಕಸದಸ್ಯ ಪೀಠ 1ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್ ಹಾಗೂ ಇಬ್ಬರು ಶ್ಯೂರಿಟಿ ಮೇಲೆ ಷರತ್ತು ಬದ್ದ ಜಾಮೀನು ನೀಡಿತ್ತು.

ಅಲ್ಲದೇ ನ್ಯಾಯಾಲಯ ಅನುಮತಿ ಇಲ್ಲದೆ ಹೊರ ರಾಜ್ಯ ಅಥವಾ ದೇಶಗಳಿಗೆ ಪ್ರವಾಸ ಕೈಗೊಳ್ಳುವಂತಿಲ್ಲ, ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಲಿ, ಪ್ರವಚನ ನೀಡಲು ನಿರ್ಬಂಧ ಹೇರಿತ್ತು. ಪ್ರತಿ 15ದಿನಗಳಿಗೊಮ್ಮೆ ಸಂಬಂಧಿಸಿದ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಹಾಕಬೇಕೆಂದು ಷರತ್ತು ವಿಧಿಸಿತ್ತು.

ಈ ಷರತ್ತುಗಳನ್ನು ರಾಮನಗರ ನ್ಯಾಯಾಲಯದಲ್ಲಿ ದಾಖಲೆಗಳಿಗೆ ಸಹಿ ಹಾಕಿ ಜಾಮೀನು ಪಡೆದುಕೊಳ್ಳುವಂತೆ ನ್ಯಾಯಪೀಠ ತೀರ್ಪಿನಲ್ಲಿ ತಿಳಿಸಿತ್ತು. ಆ ನಿಟ್ಟಿನಲ್ಲಿ ಹೈಕೋರ್ಟ್ ತೀರ್ಪಿನ ಆದೇಶಪ್ರತಿಯನ್ನು ರಾಮನಗರ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿ ಜಾಮೀನು ಪಡೆದು ಬಿಡುಗಡೆಗೊಳಿಸಬೇಕಿತ್ತು. ಆದರೆ ಶನಿವಾರ ಮತ್ತು ಭಾನುವಾರ ಕೋರ್ಟ್‌ಗೆ ರಜೆ ಇರುವುದರಿಂದ ಸೋಮವಾರ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ ಎಂದು ಆಂದಾಜಿಸಲಾಗಿತ್ತು.

ಆದರೆ ನಿತ್ಯಾನಂದ ಪರ ವಕೀಲರು ರಾಮನಗರ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಲ್ಲಿ ಇಂದೇ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ, ಹೈಕೋರ್ಟ್ ಷರತ್ತುಬದ್ದ ಜಾಮೀನಿನ ಪ್ರತಿಯ ಆದೇಶವನ್ನು ಪರಿಶೀಲಿಸಿ,ಶ್ಯೂರಿಟಿ ಮತ್ತು ವೈಯಕ್ತಿಕ ಬಾಂಡ್ ಆಧಾರದ ಮೇಲೆ ಬಿಡುಗಡೆ ಮಾಡುವಂತೆ ರಾಮನಗರ ಜೈಲರ್‌ಗೆ ಆದೇಶ ಪ್ರತಿಯನ್ನು ರವಾನಿಸಿದರು. ಆ ಹಿನ್ನೆಲೆಯಲ್ಲಿ ನಿತ್ಯಾನಂದ ಕೊನೆಗೂ ರಾಮನಗರದ ಜೈಲುವಾಸ ಅಂತ್ಯಗೊಂಡಂತಾಗಿದೆ.

ಬಿಡದಿ ಆಶ್ರಮದಲ್ಲಿ ಸಂಭ್ರಮ-ಪೂಜೆ: ರಾಮನಗರ ಜೈಲಿನಿಂದ ಬಿಡುಗಡೆಗೊಂಡು ಬಿಡದಿ ಆಶ್ರಮಕ್ಕೆ ನಿತ್ಯಾನಂದ ಸ್ವಾಮಿ ಆಗಮಿಸುತ್ತಿದ್ದಂತೆಯೇ ಭಕ್ತರು ಮತ್ತು ಶಿಷ್ಯರು ಸಂಭ್ರಮದಿಂದ ಬರಮಾಡಿಕೊಂಡರು. ಆಶ್ರಮದಲ್ಲಿ ಭಜನೆ, ವಿಶೇಷ ಪೂಜೆ ನಡೆಯುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ