ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕೃಷಿಗೆ ಪಂಚವಾರ್ಷಿಕ ಯೋಜನೆಯಲ್ಲಿ ಒತ್ತು: ಕಸ್ತೂರಿ ರಂಗನ್ (Mysore | Kasthuri Rangan | CFRI | Planning commission)
Bookmark and Share Feedback Print
 
ಸಂಸ್ಕರಣೆ ಹಾಗೂ ಮೌಲ್ಯವರ್ಧಿತ ಕೃಷಿ ಉತ್ಪನ್ನಗಳ ಉತ್ಪಾದನೆಯಂಥ ಅಂಶಗಳನ್ನು ಒಳಗೊಂಡಿರುವ ಮಾಧ್ಯಮಿಕ ಕೃಷಿ (ಸೆಕೆಂಡರಿ ಅಗ್ರಿಕಲ್ಚರ್) ನೀತಿಗೆ 12ನೇ ಪಂಚವಾರ್ಷಿಕ ಯೋಜನೆ ಹೆಚ್ಚು ಒತ್ತು ನೀಡಿದೆ ಎಂದು ಯೋಜನಾ ಆಯೋಗದ ಸದಸ್ಯ ಡಾ. ಕಸ್ತೂರಿ ರಂಗನ್ ತಿಳಿಸಿದ್ದಾರೆ.

ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದ (ಸಿಎಫ್ಆರ್ಐ) ವಜ್ರ ಮಹೋತ್ಸವ ವರ್ಷದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ '21ನೇ ಶತಮಾನದಲ್ಲಿ ಆಹಾರ ಸುರಕ್ಷತೆಗಾಗಿ ಬರಲಿರುವ ತಂತ್ರಜ್ಞಾನಗಳು' ಕುರಿತು ಉಪನ್ಯಾಸ ನೀಡಿದರು.

ಹೆಚ್ಚೆಚ್ಚು ಆಹಾರ ಪದಾರ್ಥಗಳನ್ನು ಉತ್ಪಾದಿಸಿದರೆ ಸಾಲದು. ಅದಕ್ಕೆ ತಕ್ಕಂತೆ ಸಂಸ್ಕರಣೆ ಹಾಗೂ ಮಾರುಕಟ್ಟೆಯನ್ನೂ ಒದಗಿಸಬೇಕು. ನಮ್ಮಲ್ಲಿ ಈ ಕೊರತೆ ಹೆಚ್ಚಿದೆ. ಇದಲ್ಲದೆ, ಎಲ್ಲ ಕೃಷಿ ಉತ್ಪನ್ನಗಳಲ್ಲಿರುವ ಮೌಲ್ಯವರ್ಧಿತ ಸಂಪನ್ಮೂಲಗಳನ್ನು ಬೇರ್ಪಡಿಸಬೇಕಿದೆ. ಈ ಎಲ್ಲ ಕಾರ್ಯವನ್ನು ಒಳಗೊಂಡಿರುವ ಮಾಧ್ಯಮಿಕ ಕೃಷಿ ನೀತಿಗೆ ಹೆಚ್ಚು ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಈ ಕೃಷಿ ನೀತಿಗೆ ಉತ್ತೇಜನ ನೀಡಲು 60 ಸಾವಿರ ಕೋಟಿ ರೂ. ಅಗತ್ಯವಿದೆ ಎಂದು ಯೋಜನಾ ಆಯೋಗ ಅಂದಾಜಿಸಿತ್ತು. ಆದರೆ ಈಗಿನ ಪ್ರಕಾರ ಅದಕ್ಕೆ ನೂರು ಸಾವಿರ ಕೋಟಿ ರೂ. ಬೇಕಾಗುತ್ತದೆ ಎಂದು ಹೇಳಿದರು.

ಅತಿ ಹೆಚ್ಚು ಆಹಾರ ಉತ್ಪಾದನೆ ಮಾಡುವ ದೇಶಗಳಲ್ಲಿ ಭಾರತಕ್ಕೆ ಮೂರನೇ ಸ್ಥಾನವಿದೆ. ಹಣ್ಣು -ತರಕಾರಿ ಉತ್ಪಾದನೆಯಲ್ಲಿ 2ನೇ ಸ್ಥಾನ ಹಾಗೂ ಹೈನು ಉತ್ಪನ್ನಗಳ ಉತ್ಪಾದನೆಯಲ್ಲಿ ಮೊದಲನೇ ಸ್ಥಾನದಲ್ಲಿ ಇದ್ದೇವೆ. ಹೀಗಿದ್ದರೂ 100 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ, ಆಹಾರ ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸಲೇ ಬೇಕಿದೆ. ಅದಕ್ಕಾಗಿ ಬಾಹ್ಯಾಕಾಶ ತಂತ್ರಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನದ ನೆರವು ಪಡೆಯಬೇಕಿದೆ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ