ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನಿವೇದಿತಾ ಮದುವೆಯಾಗಿದ್ದು ತಪ್ಪಲ್ಲ: ಮುರುಘಾ ಶರಣರು (Nivedhetha | Murugha mutt | Chithra durga | wedding)
Bookmark and Share Feedback Print
 
ಶರಣೆ ನಿವೇದಿತಾ ಸಾಂಸಾರಿಕ ಜೀವನಕ್ಕೆ ಆಕರ್ಷಿತರಾಗಿ ಮನಸಾಕ್ಷಿಯಂತೆ ವಿವಾಹವಾಗಿರುವುದನ್ನು ಶ್ರೀಮಠ ಗೌರವಿಸುತ್ತದೆ ಎಂದು ಮುರುಘಾಮಠದ ಪೀಠಾಪತಿ ಶ್ರೀ ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ.

ಶರಣೆ ನಿವೇದಿತಾ ಸನ್ಯಾಸತ್ವ ತ್ಯಜಿಸಿ ಗೃಹಸ್ಥಾಶ್ರಮ ಪ್ರವೇಶ ವಿಷಯ ಸುದ್ದಿಗೆ ಗ್ರಾಸವಾದ ಹಿನ್ನೆಲೆಯಲ್ಲಿ ಮಠದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದರು.

'ಸನ್ಯಾಸತ್ವ ತ್ಯಜಿಸುವ ಮುನ್ನ ನಮ್ಮೊಂದಿಗೆ ಚರ್ಚಿಸಿ ಲಿಖಿತವಾಗಿ ತಿಳಿಸಿದ್ದಾರೆ. ವ್ಯಕ್ತಿಯೊಬ್ಬರು ಸನ್ಯಾಸತ್ವ ಪಡೆಯುವುದು, ತ್ಯಜಿಸುವುದು ಅವರಿಗೆ ಬಿಟ್ಟ ವ್ಯಯಕ್ತಿಕ ವಿಷಯ. ಆದರೆ ಮಠವನ್ನು ನಿಂದನೆಗೆ ಬಳಸಿಕೊಳ್ಳುವುದು ದುಷ್ಕೃತ್ಯವಾಗುತ್ತದೆ. ಅಭಿವೃದ್ದಿ ಸಹಿಸದವರು ಇಂಥ ನೇತ್ಯಾತ್ಮಕ ಧೋರಣೆ ತಳೆಯಬಹುದು. ಶರಣೆ ನಿವೇದಿತಾ ತೊಂದರೆಗೆ ಒಳಗಾಗಿರುವುದನ್ನು ತಿಳಿಸಿದ್ದರೆ ಬಗೆಹರಿಸಲು ಪ್ರಯತ್ನಿಸಬಹುದಿತ್ತು ಎಂದ ಅವರು, ನಿವೇದಿತಾರ ಸಾಂಸಾರಿಕ ಜೀವನ ಸುಖವಾಗಿರಲಿ ಎಂದು ಆಶಿಸಿದರು.

ಅವರಿಗೆ ಶಿರಸಿ ಶಾಖಾಮಠದ ಉಸ್ತುವಾರಿ ವಹಿಸಿತ್ತಷ್ಟೆ. ಮಠ ಯಾರಿಗೂ ಬಲವಂತದಿಂದ ದೀಕ್ಷೆ ಕೊಡುವುದಿಲ್ಲ. ಅದರಂತೆ ಆಸಕ್ತಿಯಿಂದ ಬಂದ ಶರಣೆ ನಿವೇದಿತಾಗೆ ಸನ್ಯಾಸ ದೀಕ್ಷೆ ನೀಡಲಾಯಿತು. ಅವರು ಮಠದಲ್ಲಿ ಇದ್ದು ಇಂತಹ ಕೆಲಸ ಮಾಡಿದ್ದರೆ ತಪ್ಪಾಗುತ್ತಿತ್ತು. ಆದರೆ ಅಲ್ಲಿಂದ ಹೊರಬಂದು ವೈಯಕ್ತಿಕ ನಿರ್ಧಾರ ತೆಗೆದುಕೊಂಡಿದ್ದಾರೆ. ಇದಕ್ಕೆ ಸಂಸ್ಥೆಯನ್ನು ನಿಂದಿಸುವುದು ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ