ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜ್ಯ ಶಾಂತ, ಸುವ್ಯವಸ್ಥಿತವಾಗಿದೆ: ವಿ.ಎಸ್.ಆಚಾರ್ಯ (Acharya | BJP | Congress | Nelamangala | Yeddyurappa | Police)
Bookmark and Share Feedback Print
 
ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯ ಶಾಂತಿ, ಸುವ್ಯವಸ್ಥೆಯಲ್ಲಿ ಮುಂದಿದೆ ಎಂದು ರಾಜ್ಯ ಗೃಹ ಮತ್ತು ಮುಜರಾಯಿ ಸಚಿವ ಡಾ.ವಿ.ಎಸ್.ಆಚಾರ್ಯ ತಿಳಿಸಿದ್ದಾರೆ.

ನಗರದ ಹೊರವಲಯದ ವಿವರ್ಸ್ ಕಾಲೋನಿಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸರಿಗೆ ಸಮಾಜ ಘಾತುಕ ಶಕ್ತಿಗಳ ಬಗ್ಗೆ ಕಾನೂನು ಕ್ರಮ ಜರುಗಿಸಲು ಎಲ್ಲರ ಸಹಕಾರ ಬೇಕು. ಪೊಲೀಸರ ಕೈ ಬಲಪಡಿಸುವುದರಿಂದ ಕಾನೂನು ಗಟ್ಟಿಗೊಳಿಸಬಹುದು. ಇದರಿಂದ ಒಳ್ಳೆಯ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದರು.

ನೆಲಮಂಗಲದಲ್ಲಿ ನೂತನ ಠಾಣೆ ಪ್ರಾರಂಭಿಸುವಂತೆ ಹಲವು ವರ್ಷಗಳಿಂದಲೂ ಬೇಡಿಕೆ ಇತ್ತು. ಈ ಕ್ಷೇತ್ರದ ಶಾಸಕರ ಕ್ರಿಯಾಶೀಲತೆಯಿಂದ ಉದ್ಘಾಟನೆ ಸಾಧ್ಯವಾಗಿದೆ. ನೆಲಮಂಗಲದ ಜನಸಂಖ್ಯೆ ಹೆಚ್ಚಾಗಿದೆ. ಜತೆಗೆ ಸುತ್ತಮುತ್ತಲೂ ಕೈಗಾರಿಕೆಗಳು ತಲೆ ಎತ್ತುತ್ತಿವೆ ಮತ್ತು ಹೆದ್ದಾರಿಯಲ್ಲಿನ ಒತ್ತಡ ಹೆಚ್ಚಾಗಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಕಷ್ಟವಾಗುತಿತ್ತು. ಈಗ ಅನುಕೂಲ ಕಲ್ಪಿಸಲಾಗಿದೆ ಎಂದರು.

ಪೊಲೀಸರ ಮೇಲೆ ಸಾಕಷ್ಟು ಒತ್ತಡವಿದೆ. ಇದನ್ನು ನಿಭಾಯಿಸಲು ವಿಶೇಷ ಬಲ ತುಂಬಲು ಇಲಾಖೆಯನ್ನು ಆಧುನೀಕರಿಸಲಾಗುತ್ತಿದ್ದು, ಅತ್ಯಾಧುನಿಕ ತಂತ್ರಜ್ಞಾನ ಹೆಚ್ಚಿಸಲಾಗುತ್ತಿದೆ. ಪ್ರಧಾನಿ ಮತ್ತು ಗೃಹ ಸಚಿವರ ಸಭೆಯಲ್ಲೂ ರಾಜ್ಯದ ಪೊಲೀಸ್ ವ್ಯಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಇದರ ಶ್ರೇಯಸ್ಸು ನಮ್ಮ ಪೊಲೀಸರಿಗೆ ಸಲ್ಲಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು.

ವಿಶೇಷವಾಗಿ ನೂತನ ಐದು ಜಿಲ್ಲೆಗಳಾದ ಹಾವೇರಿ, ಚಾಮರಾಜನಗರ, ಯಾದಗಿರಿ, ಸಿಂಧನೂರು, ಕೊಪ್ಪಳದಲ್ಲಿ ಟ್ರಾಫಿಕ್ ಠಾಣೆಗೆ ಶೀಘ್ರ ಚಾಲನೆ ದೊರೆಯಲಿದೆ. ಠಾಣೆಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ