ರಾಜ್ಯದ ಬಂದರು ಪ್ರದೇಶಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಅದಿರು ರಫ್ತಿನ ಚಟುವಟಿಕೆಗೆ ರಾಜ್ಯ ಸರ್ಕಾರ ಶುಕ್ರವಾರ ತಡೆಹಾಕಿದೆ.
ರಾಜ್ಯದ ಮಂಗಳೂರು, ಕಾರವಾರ ಹಾಗೂ ಬೇಲೇಕೇರಿ ಬಂದರುಗಳಿಂದ ಅಕ್ರಮವಾಗಿ ಅದಿರು ವಿದೇಶಗಳಿಗೆ ರಫ್ತಾಗುತ್ತಿರುವುದನ್ನು ರಾಜ್ಯ ಸರ್ಕಾರವೇ ಒಪ್ಪಿಕೊಂಡಾಗ ಮುಲಾಜಿಲ್ಲದೆ ತನಿಖೆ ಮುಂದುವರಿಸಿ. ಅಲ್ಲಿಯವರೆಗೆ ಅದಿರು ರಫ್ತು ಚಟುವಟಿಕೆಯನ್ನು ನಿಲ್ಲಿಸುವಂತೆ ಹೈಕೋರ್ಟ್ ಇಂದು ಕಸ್ಟಮ್ ಇಲಾಖೆಗೆ ಕಟ್ಟುನಿಟ್ಟಿನ ಆದೇಶ ನೀಡಿದೆ.
ಕಾರಣಾಂತರಗಳಿಂದ ಕೆಲವು ರಾಜಕೀಯ ಹಿತಾಸಕ್ತಿಗಳ ಒತ್ತಡದಿಂದಾಗಿ ನೆನೆಗುದಿಗೆ ಬಿದ್ದಿದ್ದ ಲೋಕಾಯುಕ್ತರ ತನಿಖೆಗೂ ಹೈಕೋರ್ಟ್ ಹಸಿರು ನಿಶಾನೆ ತೋರಿದೆ.
ರಾಜ್ಯದ ಬಂದರುಗಳಿಂದ ಅಕ್ರಮ ಅದಿರು ರಫ್ತು ಚಟುವಟಿಕೆ ನಡೆಯುತ್ತಿರುವುದನ್ನು ತಡೆ ಇರುವುದನ್ನು ಪ್ರಶ್ನಿಸಿ ಕೆಲ ಖಾಸಗಿ ಕಂಪನಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಕೆ.ಪಾಟೀಲ್ ಹಾಗೂ ಎ.ಎಸ್.ಬೋಪಣ್ಣ ಅವರನ್ನೊಳ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.