ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 'ರಾಸಲೀಲೆ ನಿತ್ಯಾನಂದ' ಪ್ರವಚನಕ್ಕೆ 'ಹೈಕೋರ್ಟ್ ಅಸ್ತು' (Nithyanada | Halappa | High court | Police | Ranjith)
Bookmark and Share Feedback Print
 
NRB
ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಸಿಲುಕಿದ್ದ ಮಾಜಿ ಸಚಿವ ಹರತಾಳು ಹಾಲಪ್ಪ ಹಾಗೂ ಚಿತ್ರನಟಿ ರಂಜಿತಾಳ ಜತೆ ರಾಸಲೀಲೆ ನಡೆಸಿ ಜೈಲುಶಿಕ್ಷೆ ಅನುಭವಿಸಿ ಬಿಡುಗಡೆಗೊಂಡಿರುವ ನಿತ್ಯಾನಂದ ಸ್ವಾಮೀಜಿ ಕೋರಿ ರಾಜ್ಯ ಹೈಕೋರ್ಟ್‌ಗೆ ಸಲ್ಲಿಸಿರುವ ಮೇಲ್ಮನವಿಗೆ ಗ್ರೀನ್‌ಸಿಗ್ನಲ್ ನೀಡಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಷರತ್ತು ಬದ್ಧ ಜಾಮೀನು ನೀಡುವ ಸಂದರ್ಭದಲ್ಲಿ ಹೈಕೋರ್ಟ್ ಹಾಲಪ್ಪಗೆ, ನಗರ ಪ್ರದೇಶ ಬಿಟ್ಟು ಹೋಗದಂತೆ ವಿಧಿಸಿದ್ದ ಕಟ್ಟನಿಟ್ಟಿನ ಷರತ್ತನ್ನು ಹೈಕೋರ್ಟ್ ಶುಕ್ರವಾರ ಸಡಿಲಗೊಳಿಸಿದ್ದು, ಹಾಲಪ್ಪ ಅವರು ಕೋರಿದ್ದ ವಿನಾಯಿತಿಗೆ ಅಸ್ತು ಎಂದಿದೆ.

ಹಾಲಪ್ಪ ಅವರು ಸ್ವಕ್ಷೇತ್ರ ಸೊರಬಕ್ಕಾಗಲಿ ಅಥವಾ ಯಾವುದೇ ಸ್ಥಳಗಳಿಗಾಗಲಿ ಅವರು ಹೋಗಬಹುದು. ಆದರೆ ತಿಂಗಳಿಗೊಮ್ಮೆ ಸಿಐಡಿ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಸಹಿ ಹಾಕಬೇಕು ಮತ್ತು ತನಿಖೆಗೆ ಸಹಕರಿಸಬೇಕು ಎಂದು ಸೂಚನೆ ನೀಡಿದೆ.

ನ್ಯಾಯಮೂರ್ತಿ ಸುಭಾಷ್ ಬಿ.ಆದಿ ಅವರ ಏಕಸದಸ್ಯಪೀಠ ಈ ಆದೇಶ ನೀಡಿದ್ದು, ಹಾಲಪ್ಪನವರಿಗೆ ಈಗ ಪೂರ್ಣ ಸ್ವಾತಂತ್ರ್ಯ ನೀಡಿದಂತಾಗಿದೆ.

PTI
ನಿತ್ಯಾನಂದ ಪ್ರವಚನ ನಿರ್ಬಂಧ ತೆರವು: ರಾಸಲೀಲೆ, ಅತ್ಯಾಚಾರ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಸೇರಿದಂತೆ ಹಲವು ಆರೋಪಕ್ಕೆ ಒಳಗಾಗಿರುವ ನಿತ್ಯಾನಂದ ಸ್ವಾಮಿಗೆ ಷರತ್ತು ಬದ್ಧ ಜಾಮೀನು ನೀಡುವಾಗ ವಿಧಿಸಿದ್ದ ಪ್ರವಚನ ನಿರ್ಬಂಧವನ್ನು ಕೂಡ ಹೈಕೋರ್ಟ್ ಇಂದು ತೆರವುಗೊಳಿಸಿದೆ.

ನಿತ್ಯಾನಂದ ಅವರು ಧಾರ್ಮಿಕ ಪ್ರವಚನ ನೀಡುವಂತಿಲ್ಲ, ಪ್ರತಿ 15 ದಿನಕ್ಕೊಮ್ಮೆ ಬಿಡದಿ ಠಾಣೆಗೆ ತೆರಳಿ ಸಹಿ ಹಾಕಬೇಕು ಎಂದು ವಿಧಿಸಿದ್ದ ಷರತ್ತನ್ನು ಹೈಕೋರ್ಟ್ ಏಕಸದಸ್ಯಪೀಠ ಅನೂರ್ಜಿತಗೊಳಿಸಿದೆ. ಅಲ್ಲದೇ ತಿಂಗಳಿಗೊಮ್ಮೆ ಬಿಡದಿ ಠಾಣೆಗೆ ಹಾಜರಾಗುವಂತೆ ಸೂಚಿಸಿ, ಪ್ರವಚನಕ್ಕೆ ಅವಕಾಶ ನೀಡಿರುವುದಾಗಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ