ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಲೋಕಾಯುಕ್ತರ ತನಿಖಾ ವರದಿ ಜಾರಿಯಾಗಲಿ: ಖರ್ಗೆ (Lokayuktha | Mallikarjuna Kharge | BJP | Congress)
Bookmark and Share Feedback Print
 
ತೀವ್ರ ಚರ್ಚೆಗೆ ಗ್ರಾಸವಾಗಿರುವ ಅಕ್ರಮ ಗಣಿ ಹಗರಣ ಕುರಿತು ಲೋಕಾಯುಕ್ತರು ತನಿಖೆ ನಡೆಸಿ ಸಲ್ಲಿಸಿರುವ ವರದಿಯನ್ನು ಜಾರಿಗೆ ತರುವಂತೆ ರಾಜ್ಯ ಸರಕಾರಕ್ಕೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮಲ್ಲಿಕಾರ್ಜುನ ಖರ್ಗೆ ಸವಾಲು ಹಾಕಿದ್ದಾರೆ.

ನಗರದಲ್ಲಿ ಭೇಟಿಯಾದ ಪತ್ರಕರ್ತರ ಜತೆಗೆ ಮಾತನಾಡಿದ ಅವರು, ಈ ಕುರಿತು ಸಿಬಿಐ ತನಿಖೆಗೆ ವಹಿಸಿಕೊಡುವಂತೆ ಮುಖ್ಯಮಂತ್ರಿಗೆ ಒತ್ತಾಯಿಸಿದರು. ಗಣಿ ಹಗರಣ ಕೇವಲ ಕರ್ನಾಟಕ ಒಂದಕ್ಕೆ ಸೀಮಿತವಾಗಿಲ್ಲ, ರಾಜ್ಯದ ಗಡಿ ಒತ್ತುವರಿ, ಆಂಧ್ರಕ್ಕೆ ಹೊಂದಿಕೊಂಡು ನಡೆದಿದೆ ಹೀಗಾಗಿ ಲೋಕಾಯುಕ್ತರಿಂದ ಅಂತಾರಾಜ್ಯ ವಿಚಾರಣೆ ಮಾಡಲು ಕೆಲವೊಂದು ತೊಡಕುಗಳು ಎದುರಾಗಲಿವೆ. ಹೀಗಾಗಿ ಸಿಬಿಐ ತನಿಖೆಯೇ ಸೂಕ್ತ ಎಂದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಕುರಿತು ಪತ್ರ ಬರೆದರೆ ಕೇಂದ್ರ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಈ ನಿಟ್ಟಿನಲ್ಲಿ ನಾನು ಪ್ರತಿಪಕ್ಷದ ನಾಯಕ, ಕೆಪಿಸಿಸಿ ಅಧ್ಯಕ್ಷನಾಗಿದ್ದಾಗಲೇ ಸಿಬಿಐಗೆ ವಹಿಸಿಕೊಡುವಂತೆ ಒತ್ತಾಯಿಸಿದ್ದೆ. ಯುಪಿಎ ಅಧ್ಯಕ್ಷರಿಗೂ ಪತ್ರ ಬರೆದಿದ್ದೆ ಎಂದು ಈ ಸಂದರ್ಭದಲ್ಲಿ ಹೇಳಿದರು.

ಸಿಬಿಐ ತನಿಖೆ ಬಗ್ಗೆ ರಾಜ್ಯ ಬಿಜೆಪಿ ಮುಖಂಡರು ಮುಖ್ಯಮಂತ್ರಿಗಳು ಅದು ಕೇಂದ್ರ ಸರಕಾರದ ಹಿಡಿತದಲ್ಲಿರುವುದರಿಂದ ಸೂಕ್ತ ನ್ಯಾಯ ಸಿಗುವುದಿಲ್ಲ ಎಂದು ದೂರಿದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಸಿಒಡಿ ನಡೆಸುವ ತನಿಖೆಗಳು ಬಿಜೆಪಿ ಪರವಾಗಿರುತ್ತವೆ ಎಂದಂತಾಯಿತು ಎಂದು ಎದಿರೇಟು ನೀಡಿದರು. ಸಿಒಡಿ, ಸಿಬಿಐ ಇವೆಲ್ಲಾ ವ್ಯವಸ್ಥೆಗಳು ಯಾರೆ ಅಧಿಕಾರಕ್ಕೆ ಬಂದರೂ ಅವು ಇರುತ್ತವೆ. ಹೀಗಾಗಿ ಬಿಜೆಪಿಗೆ ವ್ಯವಸ್ಥೆಯ ಮೇಲೆ ನಂಬಿಕೆಯಿದ್ದಂತೆ ಇಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ