ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕೂಡ್ಲೆ ಗೂಂಡಾ ಸಚಿವರನ್ನು ಕೈಬಿಡಿ: ಬಿಜೆಪಿಗೆ ಸಿಪಿಎಂ (Nagaraj | CPM | Koppala | BJP | Vidhana sowdha)
Bookmark and Share Feedback Print
 
ವಿಧಾನಸಭೆಯ ಅಧಿವೇಶನದಲ್ಲಿ ಗೂಂಡಾವರ್ತನೆಗೆ ಕಾರಣರಾದ ಸಚಿವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು ಎಂದು ಸಿಪಿಎಂ ರಾಜ್ಯಕಾರ್ಯದರ್ಶಿ ಜಿ.ಎನ್. ನಾಗರಾಜ ಒತ್ತಾಯಿಸಿದ್ದಾರೆ.

ನಗರದ ವಾರ್ತಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆಯ ಇತಿಹಾಸದಲ್ಲಿಯೇ ನಡೆಯದಂಥ ಅಸಹ್ಯಕರ ಘಟನೆ ನಡೆದಿದೆ. ಬಿಜೆಪಿ ಸರಕಾರ ನೇರ ಹೊಣೆ ಹೊತ್ತು ಈಗಲಾದರೂ ಗಣಿ ಮಾಫಿಯಾದಿಂದ ಮುಕ್ತವಾಗಬೇಕು ಎಂದರು.

ವಿಧಾನಸಭೆಯಲ್ಲಿ ಅಂಗೀಕಾರವಾದ ಗೋಹತ್ಯೆ ಮಸೂದೆಯನ್ನು ವಿಧಾನ ಪರಿಷತ್‌ನಲ್ಲಿ ಬಹುಮತ ಸಿಕ್ಕ ನಂತರ ಅಂಗೀಕರಿಸಲು ಸರಕಾರ ಮುಂದಾಗಿದೆ. ಒಂದು ವೇಳೆ ಮಸೂದೆ ಅಂಗೀಕಾರವಾದರೆ ರೈತರಿಗೆ, ಕೃಷಿಕರಿಗೆ ಮಾರಕವಾಗಲಿದೆ. ಹೀಗಾಗಿ ಆಹಾರದ ಸಮಸ್ಯೆ ಜತೆಗೆ ಆಹಾರ ವಸ್ತುಗಳ ಬೆಲೆ ಏರಿಕೆಗೂ ಕಾರಣವಾಗಲಿದೆ ಎಂದು ದೂರಿದರು.

ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ಬಂದರೆ ಮಾಂಸಹಾರಿಗಳೆಲ್ಲ ಬೇರೊಂದು ಪ್ರಾಣಿ ಅವಲಂಬಿಸುತ್ತಾರೆ. ಇದರಿಂದ ಮಾಂಸದ ಬೆಲೆಯೂ ದಿಢೀರ್ ಗಗನಕ್ಕೇರುತ್ತದೆ. ಜನ ಮತ್ತೆ ಸಸ್ಯ ಆಹಾರದತ್ತ ವಾಲಿದರೆ ಅದರ ಬೆಲೆ ಏರಿಕೆಗೂ ಕಾರಣವಾಗುತ್ತದೆ. ಆದ್ದರಿಂದ ಆಹಾರ ಸಮಸ್ಯೆ ಉದ್ಭವಕ್ಕೆ ಕಾರಣವಾಗಲಿರುವ ಗೋಹತ್ಯೆ ಕಾನೂನು ನಿಷೇಧ ಕೈಬಿಡಬೇಕು. ಇಲ್ಲವಾದಲ್ಲಿ ಜು.12ರಂದು ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಕಂಪನಿಗಳ ಹಿತ ದೃಷ್ಟಿ ಕಾಯ್ದುಕೊಳ್ಳಲು ಪೆಟ್ರೋಲಿಯಂ ಬೆಲೆ ಏರಿಸಲಾಗಿದೆ. ಆದರೆ ಭಾರತ್ ಬಂದ್ ಯಶಸ್ವಿಯಾಗಿದ್ದರೂ ಕೇಂದ್ರ ಸರಕಾರದ ಹಠಮಾರಿ ಧೋರಣೆಯಿಂದ ಬೆಲೆ ಇಳಿಸಲು ಸಾಧ್ಯವಾಗಿಲ್ಲ. ಕಂಪನಿಗಳಿಗೆ ದೊಡ್ಡ ಪ್ರಮಾಣದಲ್ಲಿ ಲಾಭ ತಂದು ಕೊಡುವುದು ಕೇಂದ್ರ ಸರಕಾರದ ಉದ್ದೇಶವಾಗಿದೆ ಎಂದು ಆರೋಪಿಸಿದರು.
ಸಂಬಂಧಿತ ಮಾಹಿತಿ ಹುಡುಕಿ