ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮಕ್ಕಳ ಬಾಯಿಗೆ ಪ್ಲಾಸ್ಟರ್: 'ಶಿಕ್ಷ'ಕಿ ಅಮಾನತು (School | Teacher | Punishment)
Bookmark and Share Feedback Print
 
ತರಗತಿಯಲ್ಲಿ ಗಲಾಟೆ ಮಾಡುವ ಮತ್ತು ಕೆಟ್ಟ ಪದ ಉಪಯೋಗಿಸುವ ವಿದ್ಯಾರ್ಥಿಗಳ ಬಾಯಿಗೆ ಪ್ಲಾಸ್ಟರ್ ಅಂಟಿಸಿ ಬಿಸಿಲಲ್ಲಿ ಒಂಟಿ ಕಾಲಲ್ಲಿ ನಿಲ್ಲುವ ಶಿಕ್ಷೆ ನೀಡಿದ ಪಟ್ಟಣದ ಓಂ ಶ್ರೀನಿಕೇತನ ಟ್ರಸ್ಟ್‌ನ ವಿಜಯಭಾರತಿ ಶಾಲೆಯ ಶಿಕ್ಷಕಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಶಾಲೆಯ ಆಂಗ್ಲ ಭಾಷೆ ಶಿಕ್ಷಕಿ ರುಬಾಕ್ ಅಮಾನತುಗೊಂಡ ಶಿಕ್ಷಕಿ. ಮಕ್ಕಳು ಶಾಲೆಯಲ್ಲಿ ಗಲಾಟೆ ಮಾಡುತ್ತಾರೆ ಮತ್ತು ಕೆಟ್ಟ ಪದ ಉಪಯೋಗಿಸಿ ಬಯ್ದಾಡುತ್ತಾರೆಂಬ ಕಾರಣಕ್ಕೆ ಬುಧವಾರ 15ಕ್ಕೂ ಹೆಚ್ಚು ಮಕ್ಕಳ ಬಾಯಿಗೆ ಪ್ಲಾಸ್ಟರ್ ಅಂಟಿಸಿ ಬಿಸಿಲಲ್ಲಿ ಒಂಟಿ ಕಾಲಲ್ಲಿ ನಿಲ್ಲುವ ಶಿಕ್ಷೆ ವಿಧಿಸಿದ್ದರು. 4ನೇ ತರಗತಿ ವಿದ್ಯಾರ್ಥಿಗಳಾದ ಶಶಾಂತ್, ಸತೀಶ್, ವರುಣ್‌ಗೌಡ, ರವಿ, ಭರತ್‌ಕುಮಾರ್, ಅರವಿಂದ್, ಮಂಜು, ಪರೀಕ್ಷಕ್, ಗೌತಮ್, ಸೇರಿದಂತೆ 15ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಶಿಕ್ಷೆಗೊಳಗಾಗಿದ್ದರು.

ಈ ಬಗ್ಗೆ ಪೋಷಕರ ದೂರಿನ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜಗದೀಶ್, ಶಾಲೆಗೆ ತೆರಳಿ ಪರೀಶೀಲನೆ ನಡೆಸಿ, ಮಾಹಿತಿ ಪಡೆದರು. ಅವರು ನೀಡಿದ ಸೂಚನೆ ಮೇರೆಗೆ ಶಾಲೆಯ ಆಡಳಿತ ಮಂಡಳಿಯು ಶಿಕ್ಷಕಿ ರುಬಾಕ್‌ರನ್ನು ಅಮಾನತು ಮಾಡಿದೆ.

ಶಾಲೆಯ ವಿರುದ್ಧ ಕೈಗೊಳ್ಳಬಹುದಾದ ಕ್ರಮ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರೊಂದಿಗೆ ಚರ್ಚಿಸಲಾಗುವುದು ಎಂದು ಜಗದೀಶ್ ಅವರು ತಿಳಿಸಿದ್ದಾರೆ. ಶಿಕ್ಷಕಿ ರುಬಾಕ್ 15 ದಿನ ಹಿಂದಷ್ಟೇ ಕೆಲಸಕ್ಕೆ ಸೇರಿದ್ದರು. ಅವರು ವಿದ್ಯಾರ್ಥಿಗಳಿಗೆ ಅಮಾನವೀಯ ಶಿಕ್ಷೆ ನೀಡಿರುವ ವಿಷಯ ತಮಗೆ ತಿಳಿದಿರಲಿಲ್ಲ. ಘಟನೆ ತಮಗೂ ಬೇಸರ ಉಂಟು ಮಾಡಿದೆ. ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ ಎಂದು ಶಾಲೆಯ ಸಂಸ್ಥಾಪಕ ಅಧ್ಯಕ್ಷ, ವಕೀಲ ಪುಟ್ಟೇಗೌಡ ಪ್ರತಿಕ್ರಿಯಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ