ವಿಧಾನಸಭೆಯ ವಿಪಕ್ಷ ನಾಯಕನಾಗಲು ಸಿದ್ದರಾಮಯ್ಯ ಅನರ್ಹ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಗಂಭೀರವಾಗಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ವಿಷಯವನ್ನೇ ಮುಂದಿಟ್ಟುಕೊಂಡು ವಿಧಾನಮಂಡಲದ ಕಲಾಪ ನಡೆಯದಂತೆ ಮಾಡಿದರು. ನಾವು ತಪ್ಪು ಮಾಡಿರುವುದು ಸಾಬೀತಾದರೆ, ಒಂದೇ ಒಂದು ಕ್ಷಣವೂ ಅಧಿಕಾರದಲ್ಲಿ ಇರುವುದಿಲ್ಲ ಎಂದು ಪ್ರತಿಸವಾಲು ಹಾಕಿದರು.
ಸಿದ್ದರಾಮಯ್ಯ ಬಳ್ಳಾರಿಗಾದ್ರು ಹೋಗಲಿ, ಡೆಲ್ಲಿಗಾದ್ರು ಹೋಗಲಿ ಎಂದ ಶ್ರೀರಾಮುಲು, ಕಾಂಗ್ರೆಸ್ನವರ ಬಳ್ಳಾರಿ ಯಾತ್ರೆಗೆ ನಮ್ಮ ಮೈಸೂರು ಯಾತ್ರೆ ನಡೆಯುವುದು ಖಚಿತ. ಈ ಬಗ್ಗೆ ಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷರ ಜತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.