ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜಕೀಯ ರಂಗದ ಶುದ್ದೀಕರಣ ಅಗತ್ಯ: ಸುನಿಲ್ ಕುಮಾರ್ (BJP | Sunil kumar | Davana gere | Karnataka | Congress)
Bookmark and Share Feedback Print
 
ಜಾತೀಯತೆ, ಭ್ರಷ್ಟಾಚಾರದ ಸೋಂಕಿನಿಂದ ದುರ್ಬಲಗೊಂಡಿರುವ ರಾಜಕೀಯ ರಂಗದ ಶುದ್ದೀಕರಣಕ್ಕೆ ಯುವಜನರ ಸಹಭಾಗಿತ್ವ ಅಗತ್ಯ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಸುನಿಲ್ ಕುಮಾರ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದರು. ಭಾರತ 2020ರ ವೇಳೆಗೆ ಸೂಪರ್ ಪವರ್ ರಾಷ್ಟ್ರವಾಗಲಿದೆಯೆಂಬ ಅಬ್ದುಲ್ ಕಲಾಂ ಅವರ ಕನಸು ನನಸು ಮಾಡಬೇಕಿದೆ ಎಂದರು.

ಅಲ್ಲದೆ, ರಾಷ್ಟ್ರದ ಏಳಿಗೆ ನಿರ್ಧರಿಸಬೇಕಾದ ರಾಜಕೀಯ ಕ್ಷೇತ್ರ ಭ್ರಷ್ಟಾಚಾರ, ಕುಟುಂಬ ರಾಜಕಾರಣದಿಂದ ಕಲುಷಿತಗೊಂಡಿದೆ. ರಾಜಕೀಯದಲ್ಲಿ ಹೊಸತನ ಇಲ್ಲದಿರುವುದೇ ಇದಕ್ಕೆಲ್ಲ ಪ್ರಮುಖ ಕಾರಣ. ಅಧಿಕಾರ ಪಡೆಯುವುದೇ ರಾಜಕೀಯ ಎಂಬಂತಾಗಿದೆ. ರಾಜಕಾರಣದ ಬಗೆಗಿನ ಕ್ಷುದ್ರ ಭಾವನೆ ತೊಲಗಿಸಲು ಯುವಜನರು ಮುಂದಾಗಬೇಕು ಎಂದು ಮನವಿ ಮಾಡಿದರು.

ನಕ್ಸಲ್ ಚಟುವಟಿಕೆ ಮೂಲಕ ಭಾರತವನ್ನು ದುರ್ಬಲಗೊಳಿಸುವ ಯತ್ನ ನಡೆಯುತ್ತಿದೆ. ಇದಕ್ಕೆ ಭಯೋತ್ಪಾದನೆಯ ನಂಟೂ ಇದೆ. ಸಂಘಟಿತ ಹೋರಾಟದಿಂದ ಇಂತಹ ಸಮಸ್ಯೆಗಳನ್ನು ಪರಿಹರಿಸಬೇಕು ಎಂದರು.

ವಿಧಾನಸಭೆ ಕಲಾಪಕ್ಕೆ ಪ್ರತಿಪಕ್ಷದವರು ತೀವ್ರ ಅಡ್ಡಿಪಡಿಸುತ್ತಿದ್ದಾರೆ. ಅಭಿವೃದ್ಧಿ ವಿಚಾರ ಚರ್ಚಿಸಲು ಅವಕಾಶ ನೀಡುತ್ತಿಲ್ಲ. ಇದನ್ನು ಖಂಡಿಸಿ ಜು.17ರಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ 'ಕಾಂಗ್ರೆಸ್-ಜೆಡಿಎಸ್ ಅಳಿಸಿ, ವಿಧಾನ ಸಭೆ ಉಳಿಸಿ' ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಸುನಿಲ್ ಕುಮಾರ್ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ