ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಾಳ ಠಾಕ್ರೆ ಒಬ್ಬ ಅವಿವೇಕಿ: ನಾರಾಯಣ ಗೌಡ (Narayana Gowda | MES | Karnataka Rakshana vedike | Karnataka)
Bookmark and Share Feedback Print
 
ಮುಂಬಯಿಯಲ್ಲಿರುವ ಕನ್ನಡಿಗರ ಮೇಲೆ ಹಲ್ಲೆ ನಡೆಸುವುದಾಗಿ ಹೇಳಿರುವ ಶಿವಸೇನಾ ವರಿಷ್ಠ ಬಾಳ ಠಾಕ್ರೆ ವಿವೇಕ ಇಲ್ಲದ ಮನುಷ್ಯ, ಒಬ್ಬ ಜೋಕರ್ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಕಿಡಿಕಾರಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಠಾಕ್ರೆ ಒಮ್ಮೆ ಧರ್ಮ, ಭಾಷೆ ಹೆಸರಿನಲ್ಲಿ ಮಾತನಾಡಿದರೆ, ಮತ್ತೊಮ್ಮೆ ಹಿಂದುತ್ವ ಪರ, ಮಗದೊಮ್ಮೆ ಮರಾಠಿ ಪರ ಮಾತನಾಡುತ್ತಾರೆ ಎಂದು ದೂರಿದರು.

ಶಿವಸೇನೆಯಲ್ಲಿ ಸಾವಿರಾರು ಕನ್ನಡಿಗರಿದ್ದಾರೆ. ಶಿವಸೇನೆ ಆರ್ಥಿಕವಾಗಿ ಭದ್ರಗೊಳ್ಳಲು ಮುಂಬೈಯ ಕನ್ನಡಿಗರ ಪಾತ್ರ ಹಿರಿದಾಗಿದ್ದು,ಕರ್ನಾಟಕ ದಲ್ಲಿರುವ ಮರಾಠಿ ಭಾಷಿಕರ ಮೇಲೆ ಕರ್ನಾಟಕ ದೌರ್ಜನ್ಯ ಎಸಗುತ್ತಿದೆ ಎಂದು ಬಾಳ ಠಾಕ್ರೆ ಮತ್ತು ಉದ್ಧವ್ ಠಾಕ್ರೆ ಹೇಳುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿರುವ ಮರಾಠಿಗರು ಅಂಥ ಯಾವುದೇ ದೌರ್ಜನ್ಯಕ್ಕೊಳಗಾಗಿಲ್ಲ. ಠಾಕ್ರೆಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆಯನ್ನು ಸಾಮಾನ್ಯ ಮರಾಠಿಗ ಖಂಡಿಸುತ್ತಿದ್ದಾನೆ. ಬೆರಳೆಣಿಕೆಯ ಎಂಇಎಸ್ ಪುಢಾರಿಗಳು ತಮ್ಮ ರಾಜಕೀಯ ತೆವಲಿಗಾಗಿ ಕನ್ನಡಿಗರ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಶಿವಸೇನೆ ಮತ್ತು ಎಂಇಎಸ್ ಕಾರ್ಯಕರ್ತರು ಕನ್ನಡಿಗರ ಮೇಲೆ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಹೇಳಿರುವುದರಿಂದ ಕನ್ನಡಿಗರು ಸುಮ್ಮನೆ ಕೂಡಲಾರರು ಎಂದು ಎಚ್ಚರಿಕೆ ನೀಡಿದರು.

ಒಂದು ವೇಳೆ ಅಂತಹ ಸಂದರ್ಭ ಎದುರಾದಲ್ಲಿ ಜೀವದ ಹಂಗು ತೊರೆದು ಹೋರಾಡಲು ಕನ್ನಡಿಗರು ಸದಾ ಸಿದ್ಧ ಎಂದರು. ಕನ್ನಡ ನಾಮಫಲಕ ಧ್ವಂಸ, ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸಲು ಶಿವಸೇನೆ ಬಾಡಿಗೆ ಗೂಂಡಾಗಳ ಮೂಲಕ ಉದ್ದೇಶ ಪೂರ್ವಕವಾಗಿ ಬೆಳಗಾವಿಯಲ್ಲಿ ಗಲಾಟೆ ನಡೆಸಿದೆ ಎಂದು ದೂರಿದರು.
ಸಂಬಂಧಿತ ಮಾಹಿತಿ ಹುಡುಕಿ