ಆಧಾರವಿಲ್ಲದ ಆರೋಪಗಳನ್ನು ಮಾಡುತ್ತಿರುವ ಪ್ರತಿಪಕ್ಷಗಳು, ರಾಜ್ಯ ಸರಕಾರದ ಅಭಿವೃದ್ಧಿಗೆ ಅಡ್ಡಿಯಾಗುತ್ತಿರುವುದು ಸೂಕ್ತವಲ್ಲ. ಗಣಿಗಾರಿಕೆ ಕಾಂಗ್ರೆಸ್ ಆಳ್ವಿಕೆಯ ಪಾಪದ ಕೂಸು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕಿಡಿಕಾರಿದ್ದಾರೆ.
ಪ್ರತಿಪಕ್ಷಗಳ ಹುರುಳಿಲ್ಲದ ಆರೋಪಗಳಿಂದಾಗಿ ರೆಡ್ಡಿ ಸಹೋದರರನ್ನು ಸಂಪುಟದಿಂದ ಕೈ ಬಿಡುವ ಪ್ರಶ್ನೇ ಇಲ್ಲವೆಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಒಂದೇ ಒಂದು ಸಾಕ್ಷಾಧಾರ ಲಭ್ಯವಿಲ್ಲದ ಕಾರಣ,ಸಂಪುಟದ ಸಚಿವರನ್ನು ವಜಾಗೊಳಿಸಲು ಸಾಧ್ಯವಿಲ್ಲ.ಅಕ್ರಮ ಗಣಿಗಾರಿಕೆಯ ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ಆದೇಶಿಸಲಾಗುವುದು ಎಂದು ತಿಳಿಸಿದ್ದಾರೆ.
NRB
ರೆಡ್ಡಿ ಸಹೋದರರು ನೆರೆಯ ರಾಜ್ಯವಾದ ಆಂಧ್ರದಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಯಾವುದೇ ರೀತಿಯ ಗಣಿಗಾರಿಕೆ ನಡೆಸುತ್ತಿಲ್ಲ. ರಾಜ್ಯದ ಉಚ್ಚ ನ್ಯಾಯಾಲಯ ಹಾಗೂ ಅಪೆಕ್ಸ್ ನ್ಯಾಯಾಲಯ ಸಹೋದರರ ಪರವಾಗಿ ತೀರ್ಪು ನೀಡಿದೆ.ಪ್ರತಿಪಕ್ಷಗಳಿಗೆ ಜವಾಬ್ದಾರಿಯಿದ್ದಲ್ಲಿ,ಪುರಾವೆಗಳನ್ನು ಒದಗಿಸಲಿ.ಪುರಾವೆಗಳು ದೊರೆತಲ್ಲಿ ನಾಳೆಯೇ ಕ್ರಮ ಜರುಗಿಸಲು ಸಿದ್ಧ ಎಂದು ಮುಖ್ಯಮಂತ್ರಿಗಳು ಸವಾಲು ಹಾಕಿದರು.
ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರದಲ್ಲಿರುವವರೆಗೆ ಬಿಜೆಪಿ ಅಡಳಿತ ರೂಢ ರಾಜ್ಯಗಳು ಯಾವುದೇ ಪ್ರಕರಣವನ್ನು ಸಿಬಿಐಗೆ ಒಪ್ಪಿಸಕೂಡದು ಎನ್ನುವ ನೀತಿಗೆ ಅನುಗುಣವಾಗಿ ರೆಡ್ಡಿ ಸದೋರರರ ಆರೋಪವನ್ನು ಸಿಬಿಐ ತನಿಖೆಗೆ ಒಪ್ಪಿಸುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.