ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪ್ರಾಚೀನ ಭಾರತ ಬೆಸೆಯುವಲ್ಲಿ ಸಂಸ್ಕ್ರತ ಪಾತ್ರ ಪ್ರಮುಖ: ಭೈರಪ್ಪ (Samskrit | India | Bhirappa)
Bookmark and Share Feedback Print
 
ಸಂಸ್ಕ್ರತ ಕೇವಲ ಅಧ್ಯಾತ್ಮಿಕವಾಗಿರದೆ ಲೌಕಿಕ, ವಿಜ್ಞಾನ ವಿಷಯವು ತುಂಬಿರುವ ಗಣಿ ಎಂದು ಸಾಹಿತಿ ಡಾ.ಎಸ್.ಎಲ್.ಭೈರಪ್ಪ ವಿಶ್ಲೇಷಿಸಿದರು.

ನಗರದಿಂದ ಹೊರ ಬರುತ್ತಿರುವ ಸುಧರ್ಮಾ ಸಂಸ್ಕ್ರತ ದಿನ ಪತ್ರಿಕೆಯ 41ನೇ ವಾರ್ಷಿಕೋತ್ಸವ ಹಾಗೂ ಸಂಸ್ಕ್ರತ ಪುಸ್ತಕ ಮೇಳದಲ್ಲಿ ಮಾತನಾಡಿದ ಅವರು, ಸಂಸ್ಕ್ರತ ಸತ್ತ ಭಾಷೆ, ಇದನ್ನು ಒಂದು ಜಾತಿಯವರಿಗೆ ಮಾತ್ರ ಸೀಮಿತ ಎನ್ನುವ ಅಪಪ್ರಚಾರ ಹಿಂದಿನಿಂದಲೂ ವ್ಯಾಪಕವಾಗಿ ನಡೆಯುತ್ತಾ ಬರುತ್ತಿದೆ ಎಂದು ವಿಷಾಸಿದರು.

ಪ್ರಾಚೀನ ಭಾರತವನ್ನು ಅಖಂಡವಾಗಿ ಬೆಸೆಯುವಲ್ಲಿ ಸಂಸ್ಕ್ರತ ಪ್ರಮುಖ ಪಾತ್ರ ವಹಿಸಿದೆ. ಇದರ ಪ್ರಭಾವದಿಂದಲೇ ಇಂದು ದೇಶದ ಎಲ್ಲ ಭಾಷೆಯಲ್ಲಿಯೂ ಸಂಸ್ಕ್ರತ ಜನ್ಯ ಪದಗಳನ್ನು ಕಾಣಬಹುದು. ಇಂಥ ಪ್ರಧಾನ ಭಾಷೆಯಲ್ಲಿ ಕೇವಲ ಅಧ್ಯಾತ್ಮಿಕ ಮಾತ್ರ ತುಂಬಿದೆ ಎನ್ನುವ ಟೀಕೆಗಳು ಬಂದಿವೆ. ಸಂಸ್ಕ್ರತ ಕೇವಲ ಅಧ್ಯಾತ್ಮಿಕ ಮಾತ್ರವಲ್ಲ, ಅದರಲ್ಲಿಯೂ ಗಣಿತ, ವಿಜ್ಞಾನದ ವಿಷಯಗಳಿವೆ ಎನ್ನುವುದನ್ನು ಚೀನಾ ಸೇರಿದಂತೆ ಇತರೆ ದೇಶಗಳು ಮನಗಂಡು ಅದರ ಅಧ್ಯಯನದಲ್ಲಿ ತೊಡಗಿವೆ. ಆದರೆ ಜ್ಞಾನ ಬೆಳೆಸಲು ತಾಯಿ ಬೇರಿನಂತಿರುವ ಇಂಥ ಅದ್ಬುತ ಭಾಷೆಯನ್ನು ನಮ್ಮವರು ಕಡೆಗಣಿಸದೆ ಅಧ್ಯಯನದಲ್ಲಿ ತೊಡಗುವಂತೆ ಸಲಹೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ