ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿಡಿಐ ಪರೀಕ್ಷರಣೆ ಸೆಪ್ಟೆಂಬರ್‌ಗೆ ಪೂರ್ಣ: ನಮೋಶಿ (Nanjundappa report | Government | Namoshi)
Bookmark and Share Feedback Print
 
ಡಾ.ಡಿ.ಎಂ.ನಂಜುಂಡಪ್ಪ ವರದಿಯಲ್ಲಿ ನಮೂದಿಸಿರುವ ಮಾನವ ಅಭಿವೃದ್ದಿ ಸೂಚ್ಯಂಕಗಳ (ಸಿಡಿಐ) ಪರಿಷ್ಕರಣೆ ಕಾರ್ಯ ಆರಂಭವಾಗಿದ್ದು ಸೆಪ್ಟೆಂಬರದಲ್ಲಿ ಪೂರ್ಣಗೊಳ್ಳಲಿದೆ ಎಂದು ವರದಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಶೀಲ್ ನಮೋಶಿ ತಿಳಿಸಿದ್ದಾರೆ.

ನಗರದ ಎಂಆರ್ಎಂಸಿಯಲ್ಲಿ ಆರೋಗ್ಯ ಮಿತ್ರರಿಗಾಗಿ ನಡೆದ ತರಬೇತಿ ಶಿಬಿರದ ಉದ್ಘಾಟನೆ ನಂತರ ಪತ್ರಕರ್ತರ ಜತೆಗೆ ಮಾತನಾಡಿದ ಅವರು, 1999-2000ರಲ್ಲಿನ ಸ್ಥಿತಿ ಆಧರಿಸಿ ಅಂಕಿ ಸಂಖ್ಯೆಗಳನ್ನು ಸಂಗ್ರಹಿಸಲಾಗಿದ್ದು, ಈಗ ಹತ್ತು ವರ್ಷಗಳು ಗತಿಸಿದ್ದರಿಂದ ಹೊಸದಾಗಿ ಪರಿಷ್ಕರಣೆ ಮಾಡುವ ಉದ್ದೇಶದಿಂದ ಈ ಕೆಲಸ ಶುರು ಮಾಡಲಾಗಿದೆ ಎಂದರು.

ಅದಕ್ಕಾಗಿ ಅಭಿವೃದ್ದಿ ಆಯುಕ್ತರು, ಹಣಕಾಸು, ಆರ್‌ಡಿಪಿಆರ್, ಕಾನೂನು ಮೊದಲಾದ ಪ್ರಮುಖ ಇಲಾಖೆಗಳ ಕಾರ್ಯದರ್ಶಿಗಳನ್ನು ಒಳಗೊಂಡ ಮತ್ತು ಆರ್ಥಿಕ ತಜ್ಞರಿರುವ ಸಮಿತಿಯನ್ನು ರಚಿಸಲಾಗಿದ್ದು, ಕೇಂದ್ರ ಸರಕಾರ ಸ್ವಾಮ್ಯದ ಐಸ್ಯಾಕ್ (ಇನ್ಸ್ಟಿಟ್ಯೂಟ್ ಆಫ್ ಸೊಸಿಯಲ್ ಎಕನಾಮಿಕ್ ಚೇಂಜ್) ತಜ್ಞರಾದ ಮದೇಶ್ವರನ್, ಸಮಿತಿ ಸದಸ್ಯ ಅಬ್ದುಲ್ ಅಜೀಜ್ ಮೊದಲಾದವರು ಕೂಡಿಕೊಂಡು ಈ ಕಾರ್ಯ ಮಾಡುತ್ತಿದ್ದಾರೆ ಎಂದರು.

ಹೊಸ ಸಮಿತಿ ಪ್ರತಿ ತಾಲೂಕಿನಲ್ಲಿ ಸಮೀಕ್ಷೆ ನಡೆಸಿ ಮಾಹಿತಿ ಕಲೆ ಹಾಕುತ್ತಿದೆ. ಸಂಪೂರ್ಣ ಕೆಲಸ ಮುಗಿದ ನಂತರ ವರದಿ ಸಿದ್ಧಪಡಿಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು. ಅವರು ಅದನ್ನು ಆಧರಿಸಿ ಯಾವ ಕ್ರಮ ಕೈಗೊಂಡು ಸೂಚನೆ ನೀಡುತ್ತಾರೊ ಹಾಗೆ ಪಾಲಿಸಿ ಹಿಂದುಳಿದ ತಾಲೂಕುಗಳನ್ನು ಮಾದರಿಯ ರೀತಿಯಲ್ಲಿ ಅಭಿವೃದ್ದಿ ಮಾಡಲಾಗುವುದು ಎಂದು ನಮೋಶಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹೊಸದಾಗಿ ನಂಜುಂಡಪ್ಪ ವರದಿಯಲ್ಲಿನ ಅಂಕಿ-ಅಂಶ, ಮಾನವ ಅಭಿವೃದ್ದಿ ಸೂಚ್ಯಂಕಗಳನ್ನು ಬದಲಾವಣೆ ಮಾಡುವುದರಿಂದ ವರದಿಯನ್ನು ಮರು ತಯಾರಿಸಿದಂತೆ ಆಗಲಿದ್ದು ಹಿಂದುಳಿದ ಪ್ರದೇಶಗಳಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಂಜುಡಪ್ಪ ವರದಿ, ಸರಕಾರ ನಮೋಶಿ