ನಗರದಲ್ಲಿ ರಾಜ್ಯ ಮಟ್ಟದ ಪ್ರಾಂತ್ಯ ಕಾರ್ಯಕಾರಿಣಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಭಾರತದಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಆತಂಕ ಮತ್ತು ಹತಾಶೆ ಮೂಡಿಸಿದೆ ಎಂದರು.
ಅಲ್ಲದೆ, ಭಾರತ ಈವರೆಗೆ ಪಾಕ್ ಜತೆ 52 ಬಾರಿ ಮಾತುಕತೆ ನಡೆಸಿದೆ. ಒಂದು ಗುಲಗಂಜಿ ತೂಕದಷ್ಟೂ ಪ್ರಯೋಜನವಾಗಿಲ್ಲ. ಇತ್ತ ಮಾತುಕತೆಗೆ ಭಾರತವನ್ನು ಆಹ್ವಾನಿಸುವ ಪಾಕ್ ಅತ್ತ ಕಾಶ್ಮೀರ ಕಣಿವೆಯಲ್ಲಿ ಗುಂಡು ಹಾರಿಸುತ್ತದೆ. ಮಾತುಕತೆ ಮೂಲಕ ಕಾಶ್ಮೀರ ಸಮಸ್ಯೆ ಪರಿಹರಿಸುವುದು ಅಸಾಧ್ಯ. ಪಾಕ್, ಭಯೋತ್ಪಾದನಾ ಕೇಂದ್ರ ಎಂಬುದು ವಿಶ್ವಕ್ಕೆ ಜನಜನಿತವಾಗಿದೆ. ಇಂತಹ ರಾಷ್ಟ್ರದ ಜತೆ ಮಾತುಕತೆ ನಡೆಸುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು.
ಪಾಕಿಸ್ತಾನ ಜತೆ ಮಾತುಕತೆ ನಿಲ್ಲಿಸಿ ಕಾರ್ಯಾಚರಣೆ ನಡೆಸಬೇಕೆಂದು ರಾಷ್ಟ್ರಪತಿ, ಪ್ರಧಾನಿಗೆ ಪತ್ರ ಬರೆಯಲಾಗುವುದು. ಕಾಶ್ಮೀರ ಭಾರತದ್ದು. ಈ ಬಗ್ಗೆ ಸಂದೇಹವಿಲ್ಲ. ಇದರ ವಿಚಾರದಲ್ಲಿ ಪಾಕ್ ಅನಾವಶ್ಯಕವಾಗಿ ಸಮಸ್ಯೆ ಹುಟ್ಟು ಹಾಕುತ್ತಿದೆ ಎಂದು ಆರೋಪಿಸಿದರು.