ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕಾಂಗ್ರೆಸ್‌ಗೆ ತಾಕತ್ತಿದ್ದರೆ ಕೇಂದ್ರಕ್ಕೆ ಒತ್ತಾಯಿಸಲಿ: ರೇಣುಕಾಚಾರ್ಯ (Congress | Renukacharya | BJP | Yeddyurappa | Illigal Mining)
ಕಾಂಗ್ರೆಸ್‌ಗೆ ತಾಕತ್ತಿದ್ದರೆ ಕೇಂದ್ರಕ್ಕೆ ಒತ್ತಾಯಿಸಲಿ: ರೇಣುಕಾಚಾರ್ಯ
ದಾವಣಗೆರೆ, ಸೋಮವಾರ, 19 ಜುಲೈ 2010( 18:01 IST )
ತಾಕತ್ತಿದ್ದರೆ ಕಾಂಗ್ರೆಸ್ ನಾಯಕರು ಅದಿರು ರಫ್ತು ನಿಷೇಧಿಸಲು ಕೇಂದ್ರ ಸರಕಾರಕ್ಕೆ ಒತ್ತಾಯ ಮಾಡಲಿ ಎಂದು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.
ಆಹೋರಾತ್ರಿ ಧರಣಿ ನಡೆಸಿ ವಿಧಾನಮಂಡಲ ಕಲಾಪದ ಅಮೂಲ್ಯ ಸಮಯ ಹಾಳು ಮಾಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ವಿದ್ಯುತ್, ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರ ಬಗ್ಗೆ ಯೋಚಿಸದ ಆ ಎರಡು ಪಕ್ಷಗಳ ಶಾಸಕರು ಧರಣಿ ಮಾಡುವುದರಲ್ಲೇ ಸಮಯ ವ್ಯರ್ಥ ಮಾಡಿದರು. ಧರಂಸಿಂಗ್, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ, 90 ಮಂದಿಗೆ ಗಣಿಗಾರಿಕೆಗೆ ಅನುಮತಿ ನೀಡಲು ಶಿಫಾರಸು ಮಾಡಿದ್ದಾರೆ. ಈ ಪೈಕಿ ಕೇಂದ್ರ ಸರಕಾರ 59 ಕ್ಕೆ ಪರವಾನಗಿ ನೀಡಿದೆ. ಈ ಎರಡು ಪಕ್ಷಗಳಿಗೆ ಗಣಿಗಾರಿಕೆ ಪ್ರಶ್ನಿಸುವ ನೈತಿಕ ಹಕ್ಕಿಲ್ಲ ಎಂದು ತಿರುಗೇಟು ನೀಡಿದರು.
ನೆರೆ ಸಂತ್ರಸ್ತರ ಹಣ ದುರ್ಬಳಕೆ ಮಾಡಿಕೊಂಡಿರುವ ಕಾಂಗ್ರೆಸ್ ರಾಜ್ಯದ ಜನತೆಗೆ ಮೊದಲು ಲೆಕ್ಕ ಕೊಡಬೇಕು. ಹಣ ದುರ್ಬಳಕೆ ಆಪಾದನೆಯಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್ ಜನರ ಗಮನ ಬೇರೆಡೆ ಸೆಳೆಯುವ ದೃಷ್ಟಿಯಿಂದ ಸದನದಲ್ಲಿ ಗದ್ದಲ ಎಬ್ಬಿಸಿದೆ ಎಂದು ದೂರಿದರು.
ಲೋಕಾಯುಕ್ತರಿಗೆ ಪರಮಾಧಿಕಾರ ನೀಡಬೇಕೆಂಬ ಬೇಡಿಕೆ ಮುಖ್ಯಮಂತ್ರಿ ಯಡಿಯೂರಪ್ಪ ಈಡೇರಿಸಿದ್ದಾರೆ. ಇದನ್ನು ಸಹಿಸದ ಪ್ರತಿಪಕ್ಷಗಳು ಬಳ್ಳಾರಿ ಸಚಿವರನ್ನು ಕೈಬಿಡುವಂತೆ ಆಗ್ರಹಿಸಿ ಮೊಂಡುತನ ಪ್ರದರ್ಶಿಸುತ್ತಿವೆ. ಬಳ್ಳಾರಿ ಸಚಿವರ ಮೇಲಿನ ಆರೋಪಗಳಿಗೆ ಪೂರಕ ದಾಖಲೆ ಒದಗಿಸಿದರೆ ಮುಖ್ಯಮಂತ್ರಿ ಸಾಧ್ಯವಾದ ಕ್ರಮ ಕೈಗೊಳ್ಳುತ್ತಾರೆ ಎಂದರು.