ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸೌಲಭ್ಯ ಕೊಡಿ; ಮೈಮೇಲೆ 'ಮಲ' ಸುರಿದುಕೊಂಡು ಪ್ರತಿಭಟನೆ! (Havery | Protest | Police | Muncipal | Karnataka | Yeddyurappa)
Bookmark and Share Feedback Print
 
ಆಡಳಿತಾರೂಢ ಸರಕಾರ ಮತ್ತು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಹಲವಾರು ವಿಧದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. ಆದರೆ ಗುಡಿಸಲು ತೆರವು, ನೀರು ಸ್ಥಗಿತಗೊಳಿಸಿರುವುದನ್ನು ವಿರೋಧಿಸಿ ಭಂಗಿ ಕುಟುಂಬ ಮೈಮೇಲೆ ಮಲ ಸುರಿದುಕೊಂಡು ಆಕ್ರೋಶ ವ್ಯಕ್ತಪಡಿಸಿದ ಘಟನೆ ಸವಣೂರು ಪುರಸಭೆ ಆವರಣದಲ್ಲಿ ಮಂಗಳವಾರ ನಡೆದಿದೆ.

ಕಳೆದ ಹಲವಾರು ವರ್ಷಗಳಿಂದ ಮೂಲಭೂತ ಸೌಕರ್ಯಗಳಿಲ್ಲದೆ ವಾಸಿಸುತ್ತಿದ್ದ ಇಲ್ಲಿನ ಭಂಗಿ ಕುಟುಂಬದ ಕೂಗಿಗೆ ಬೆಲೆಯೇ ಇಲ್ಲದಂತಾಗಿತ್ತು. ಇದೀಗ ಭಂಗಿ ಕುಟುಂಬದ ಗುಡಿಸಲು ತೆರವುಗೊಳಿಸುವ ಪುರಸಭೆಯ ನಿರ್ಧಾರದಿಂದ ರೋಸಿಹೋದ ಸಮಾಜದ ಮೂವರು ಯುವಕರು ಎರಡು ಕೊಡಗಳಲ್ಲಿ ತಂದಿದ್ದ ಮನುಷ್ಯರ ಮಲವನ್ನು ತಲೆಮೇಲೆ ಸುರಿದುಕೊಂಡು ಪ್ರತಿಭಟನೆ ನಡೆಸಿದರು. ನಂತರ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪುರಸಭೆ ಶವಯಾತ್ರೆ ನಡೆಸಿದರು.

ಸವಣೂರಿನ ಭಂಗಿ ಕುಟುಂಬ ಕಳೆದ 70ವರ್ಷಗಳಿಂದ ಸವಣೂರು ನಿವಾಸಿಗಳ ಮಲವನ್ನು ಬರಿಗೈಯಿಂದಲೇ ಹೊರತೆಗೆದು ಹೊರುವ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿದೆ. ಈ ಐದು ಕುಟುಂಬಗಳು ಕುಡಿಯುವ ನೀರು, ವಾಸಿಸಲು ಮನೆ ಮತ್ತು ಮೂಲ ಸೌಕರ್ಯಕ್ಕಾಗಿ ನಡೆಸಿದ ಹೋರಾಟ ಮಾತ್ರ ಪ್ರಯೋಜನವಿಲ್ಲದಂತಾಗಿತ್ತು.

ಇದೀಗ ಭಂಗಿ ಕುಟುಂಬ ವಾಸಿಸುತ್ತಿರುವ ಶೆಡ್‌ಗಳನ್ನು ತೆರವುಗೊಳಿಸಿ, ವಾಣಿಜ್ಯ ಸಂಕೀರ್ಣ ನಿರ್ಮಿಸಲು ಪುರಸಭೆ ಮುಂದಾಗಿತ್ತು. ಅಲ್ಲದೇ ಅಧಿಕಾರಿಗಳು ಇತ್ತೀಚೆಗೆ ನಲ್ಲಿ ನೀರಿನ ಸಂಪರ್ಕವನ್ನೂ ಕಡಿತಗೊಳಿಸಿದ್ದರು. ಇದರಿಂದ ದಿಕ್ಕೆಟ್ಟ ಭಂಗಿ ಕುಟುಂಬದ ಸದಸ್ಯರು ಪುರಸಭೆ ಆವರಣದಲ್ಲಿಯೇ ಮೈಮೇಲೆ ಮಲ ಸುರಿದುಕೊಂಡು ಅಧಿಕಾರಿಗಳ ಮತ್ತು ಸರಕಾರದ ಕಣ್ಣು ತೆರೆಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಪ್ರತಿಭಟನೆ ನಂತರ ಭಂಗಿ ಕುಟುಂಬದ ಸದಸ್ಯರು ಮತ್ತು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಕಂದಾಯ ಇಲಾಖೆಗೆ ತೆರಳಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ತಹಸೀಲ್ದಾರ್, ಭಂಗಿ ಕುಟುಂಬಗಳ ಸಮಸ್ಯೆಯನ್ನು ಶೀಘ್ರವೇ ಪರಿಹರಿಸುವುದಾಗಿ ಭರವಸೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ