ಲೋಕಾಯುಕ್ತ ಸಂತೋಷ ಹೆಗ್ಡೆ ಅಧಿಕಾರದಲ್ಲಿ ಮುಂದುವರಿಯಬೇಕೆಂದು ಹೋರಾಟ ಮಾಡಿದವರು ನೀವೇ. ಈಗ ಲೋಕಾಯುಕ್ತ ತನಿಖೆ ಬೇಡ ಅನ್ನೋರು ನೀವೇ ! ಇದು ಹ್ಯಾಂಗ್ರಿ ಸಾಧ್ಯ ಎಂದು ಸಚಿವ ರೇವುನಾಯಕ ಬೆಳಮಗಿ ಕಾಂಗ್ರೆಸ್ ಮುಖಂಡರನ್ನು ಪ್ರಶ್ನಿಸಿದ್ದಾರೆ.
ಲೋಕಾಯುಕ್ತರಾಗಿ ಅವರೇ ಇರಬೇಕು ಅಂತ ರಾಜ್ಯಾದ್ಯಂತ ಕಾಂಗ್ರೆಸ್, ಜೆಡಿಎಸ್‌ನಿಂದ ಹೋರಾಟ ನಡೀತು. ಅವರ ಮನೆಗೆ ಹೋಗಿ ಸರಕಾರ ಮನವೊಲಿಸಲಿ ಅಂದ್ರು. ಈಗ ಅದೇ ಲೋಕಾಯುಕ್ತರಿಂದಲೇ ಗಣಿ ತನಿಖೆ ನಡೆಯುತ್ತೆ ಅಂದರೆ ಆಕ್ಷೇಪ ಯಾಕೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದರು.
ಗೋ ಹತ್ಯೆ ಆಗಬಾರದು ಎನ್ನುವುದು ಸರಕಾರದ ಕಾಳಜಿ. ಈ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಲಿ ಎಂದು ನಾನು ಅವರಲ್ಲಿ ಬೇಡಿಕೊಳ್ಳುವೆ. ಒಂದು ವೇಳೆ ಮಸೂದೆಗೆ ಅಂಕಿತ ಹಾಕದಿದ್ದರೆ ಮುಂದಿನ ಹೆಜ್ಜೆ ಬಗ್ಗೆ ಮುಖ್ಯಮಂತ್ರಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.