ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ತಿಂಗಳೊಳಗೆ 3 ಸಾವಿರ ಆಸರೆ ಮನೆ: ಕಾರಜೋಳ (Karajola | North Karnataka | Asare Home | BJP)
Bookmark and Share Feedback Print
 
ಒಂದು ತಿಂಗಳೊಳಗಾಗಿ ಮೂರು ಸಾವಿರ ಆಸರೆ ಮನೆಗಳು ವಾಸಕ್ಕೆ ಸಜ್ಜಾಗಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಜಿಲ್ಲೆಯ ಪ್ರವಾಹ ಪೀಡಿತ ಸಂತ್ರಸ್ತರಿಗಾಗಿ ಕಮತಗಿ, ಇಂಗಳಗಿ, ಸುರಳಿಕಲ್ಲ ಮತ್ತು ಚಿಕ್ಕಮಾಗಿಯಲ್ಲಿ ನಿರ್ಮಿಸುತ್ತಿರುವ ಆಸರೆ ಮನೆಗಳನ್ನು ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಆಸರೆ ಮನೆಗಳ ನಿರ್ಮಾಣಕ್ಕಾಗಿ ಜಿಲ್ಲೆಯ 59 ಹಳ್ಳಿಗಳಲ್ಲಿ 1090 ಎಕರೆ ಭೂಮಿ ಖರೀದಿಸಲಾಗಿದೆ. ಖರೀದಿಸಿದ ಎಲ್ಲ ಜಮೀನಿಗೂ ಹಣ ಪಾವತಿಸಲಾಗಿದೆ. 30 ಕಡೆಗಳಲ್ಲಿ ಕಾಮಗಾರಿ ಆರಂಭಗೊಂಡಿದೆ. 6,542 ಮನೆಗಳ ಕೆಲಸ ಪ್ರಗತಿಯಲ್ಲಿದೆ. ಡಿಸೆಂಬರ್ ಅಂತ್ಯದೊಳಗೆ ಎಲ್ಲ ಮನೆಗಳು ನಿರ್ಮಾಣಗೊಳ್ಳಲಿವೆ. ನದಿ ತೀರದ, ಹಳ್ಳಗಳ ದಂಡೆಯ ಮೇಲಿನ ಜನರಿಗೆ ಪ್ರಥಮ ಆದ್ಯತೆ ನೀಡಿ ಮನೆಗಳನ್ನು ಹಂಚಿಕೆ ಮಾಡಲಾಗುವುದು ಎಂದರು.

ಆಸರೆ ಮನೆಗಳ ನಿರ್ಮಾಣದ ಜತೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವ ಕೆಲಸ ಕೂಡ ನಡೆದಿದೆ. ಯಾವುದೇ ರೀತಿಯ ಹಣಕಾಸಿನ ಕೊರತೆ ಇಲ್ಲ. ರಾಜ್ಯದಲ್ಲಿ 340 ಹಳ್ಳಿಗಳ ಸ್ಥಳಾಂತರಕ್ಕೆ 600 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಇದರಲ್ಲಿ 150 ಕೋಟಿ ರೂ.ಗಳನ್ನು ಜಮೀನು ಖರೀದಿಗೆ ನೀಡಲಾಗಿದೆ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ