ವಿಧಾನಸಭೆಯಲ್ಲಿ ಅಂಗೀಕರಿಸಲಾಗಿರುವ ಒಟ್ಟು 12 ಮಸೂದೆಗಳು ಇನ್ನು ತಮಗೆ ತಲುಪಿಲ್ಲ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ತಿಳಿಸಿದ್ದು, ತಮ್ಮ ಬಳಿ ಬಂದ ನಂತರ ಸಮಗ್ರ ಅಧ್ಯಯನ ನಡೆಸಿ ನಂತರ ಮಸೂದೆಗಳ ಅಂಗೀಕಾರದ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಗೋಹತ್ಯೆ ನಿಷೇಧ ಕಾಯ್ದೆ ಸೇರಿದಂತೆ ಒಟ್ಟು 12 ಮಸೂದೆಗಳು ನನಗೆ ಇನ್ನೂ ತಲುಪಿಲ್ಲ, ನನ್ನ ಬಳಿ ಬಂದ ನಂತರ ಅಧ್ಯಯನ ನಡೆಸಿ ಅವುಗಳನ್ನು ಅಂಗೀಕರಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ರಾಜ್ಯಪಾಲರು ಸ್ಪಷ್ಟಪಡಿಸಿದ್ದಾರೆ.
ಬುಧವಾರ ಇಂದಿರಾ ನಗರದಲ್ಲಿ ಮಕ್ಕಳ ಸಮರ್ಪಕ ಬೆಳವಣಿಗೆಗಾಗಿ ಕುಟುಂಬ ಆಧಾರಿತ ಕ್ರೇಡಿಯಾಟಿಕ್ ಥೆರಪಿ ಕೇಂದ್ರ ಆರಂಭಿಸಿರುವ ಪೈ ಸಂಸ್ಥೆ ಉದ್ಘಾಟಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಅಲ್ಲದೆ, ಅಕ್ರಮ ಗಣಿಗಾರಿಕೆಯನ್ನು ಲೋಕಾಯುಕ್ತರ ತನಿಖೆಗೆ ಒಳಪಡಿಸಿದ್ದು, ತಮಗೆ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರ ಮೇಲೆ ವಿಶ್ವಾಸವಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.