ತೀವ್ರ ಮಳೆ ಅಭಾವ ಎದುರಿಸುತ್ತಿರುವ ಹಾಸನ ತಾಲೂಕನ್ನು ಕೂಡಲೇ ಬರಪೀಡಿತವೆಂದು ಘೋಷಿಸಿ ಪರಿಹಾರೋಪಾಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಚ್.ಎಸ್.ಪ್ರಕಾಶ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ ಅಂತ್ಯಕ್ಕೆ ವಾಡಿಕೆ ಮಳೆಯಲ್ಲಿ ಶೇ.50ರಷ್ಟೂ ಬಿದ್ದಿಲ್ಲ. ಬಟಾಟೆ, ಜೋಳ, ನೆಲಗಡಲೆ ಸೇರಿದಂತೆ ಮುಂಗಾರು ಬೆಳೆ ಹಾಳಾಗಿದೆ ಎಂದರು.
ತಾಲೂಕಿನಲ್ಲಿ ಈ ಬಾರಿ 13 ಸಾವಿರ ಹೆಕ್ಟೇರ್‌ನಲ್ಲಿ ಬಟಾಟೆ ಬಿತ್ತನೆ ಆಗಿದ್ದು, ಬೆಳೆ ಉತ್ತಮವಾಗಿತ್ತು. ಆದರೆ, ಭೂಮಿಯಲ್ಲಿ ತೇವಾಂಶವಿಲ್ಲದ್ದರಿಂದ ಆಲೂಗಡ್ಡೆ ಬಲಿಯಲು ಸಾಧ್ಯವಾಗಿಲ್ಲ. ಆದ್ದರಿಂದ ಈ ಬಾರಿಯೂ ರೈತರು ಸಂಕಷ್ಟಕ್ಕೆ ಸಿಲುಕಿಕೊಳ್ಳಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಹೊಸಲೈನ್ ರಸ್ತೆ ಅಗಲಗೊಳಿಸುವ ಪ್ರಶ್ನೆಯೇ ಇಲ್ಲ. ಈ ರಸ್ತೆಗೆ ಡಾಂಬರೀಕರಣ ಮಾಡಿ ಅಭಿವೃದ್ದಿಪಡಿಸಿದ ಬಳಿಕ ಲೋಕೋಪಯೋಗಿ ಇಲಾಖೆಯಿಂದ ನಗರಸಭೆಗೆ ಹಸ್ತಾಂತರಿಸಿಕೊಳ್ಳಲಾಗುವುದು ಎಂದು ಹೇಳಿದರು.