ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಐಟಿಐ ಕಾಲೇಜು ಅಕ್ರಮದಲ್ಲಿ ಸರಕಾರ ಶಾಮೀಲು: ದೇಶಪಾಂಡೆ (Desh pandy | ITI | KPCC | BJP | Congress)
Bookmark and Share Feedback Print
 
ಹಳಿಯಾಳ ಐಟಿಐ ಕಾಲೇಜಿನ ಭ್ರಷ್ಟಾಚಾರದಲ್ಲಿ ರಾಜ್ಯ ಸರಕಾರ ಶಾಮೀಲಾಗಿರುವ ಸಂಶಯವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಆರೋಪಿಸಿದ್ದಾರೆ.

ಕಾಲೇಜಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ ಅವರು, ತಾಲೂಕಿನ ಯುವಕರಿಗೆ ಉದ್ಯೋಗಾವಕಾಶ ದೊರಕಲಿ ಎಂಬ ಸದುದ್ದೇಶದಿಂದ ಹಳಿಯಾಳದಲ್ಲಿ ಸರಕಾರಿ ಐಟಿಐ ಕಾಲೇಜ್ ಆರಂಭಿಸಲಾಗಿತ್ತು. ಆದರೆ ಇದು ವಿದ್ಯಾರ್ಥಿಗಳಿಗೆ ಜ್ಞಾನ ನೀಡುವ ಬದಲು ಭ್ರಷ್ಟಾಚಾರದ ಕೇಂದ್ರವಾಗಿ ಪರಿಣಮಿಸಿದ ಸುದ್ದಿ ನಿಜವಾಗಿಯೂ ದುಃಖವನ್ನುಂಟು ಮಾಡಿದೆ ಎಂದರು.

ಐಟಿಐನಲ್ಲಿ ಭ್ರಷ್ಟಾಚಾರ ನಡೆಯುತ್ತದೆ, ವಿದ್ಯಾರ್ಥಿಗಳಿಂದ ಹಣ ಸುಲಿಗೆ ಮಾಡಲಾಗುತ್ತದೆ ಎಂದು ರಾಜ್ಯ ಸರಕಾರಕ್ಕೆ, ಕಾರ್ಮಿಕ ಖಾತೆಗೆ ಹಾಗೂ ಸಂಬಂಧಿಸಿದ ಸಚಿವಾಲಯಕ್ಕೆ ಲಿಖಿತ ದೂರು ನೀಡಿದ್ದರೂ ಸಹ ಇನ್ನೂವರೆಗೆ ಕ್ರಮ ಕೈಗೊಳ್ಳದೇ ಮೌನವಾಗಿರುವುದು ಸಂಶಯಕ್ಕೆ ಎಡೆಮಾಡಿಕೊಡುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಸರಕಾರ ಈ ಬಾರಿಯಾದರೂ ಜು. 23 ರಂದು ನಡೆಯುತ್ತಿರುವ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಲಿ. ಭ್ರಷ್ಟಾಚಾರದಲ್ಲಿ ಶಾಮೀಲಾಗಿರುವವರ ಮೇಲೆ ಕ್ರಮ ಕೈಗೊಳ್ಳಲಿ. ಮುಖ್ಯವಾಗಿ ಈ ಕಾಲೇಜಿನ ಪ್ರಾಚಾರ್ಯರನ್ನು ಹಾಗೂ ಉಪನ್ಯಾಸಕರನ್ನು ಬದಲಾಯಿಸಲಿ ಎಂದು ಅವರು ಆಗ್ರಹಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ