ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಖಾವಿ ಕಳಂಕ: ಕಾಮಿ ಸ್ವಾಮಿ ನಿತ್ಯಾನಂದ ಕೃತಿ ಬಿಡುಗಡೆ (Nithyananda | Ranjitha | Karnataka | Tamil nadu | Vishwanath)
Bookmark and Share Feedback Print
 
PTI
ರಾಜಕಾರಣಿಗಳು ಇಂದು ಸ್ವಾಮೀಜಿಗಳಿಗೆ ಶರಣಾಗುವ ಮೂಲಕ ಖಾದಿ, ಕಾಕಿ, ಖಾವಿ ಅಪವಿತ್ರಗೊಂಡಿದೆ. ಸ್ವಾಮೀಜಿಗಳು ಆಸ್ತಿ ಸಂಪಾದಿಸುವುದರಲ್ಲಿ ಕಾಲಕಳೆಯುವ ಮೂಲಕ ಖಾವಿಗೆ ಕಳಂಕ ತಂದಿದ್ದಾರೆ ಎಂದು ಲೋಕಸಭಾ ಸದಸ್ಯ ಎಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಅವರು ನಗರದ ಪ್ರೆಸ್‌ಕ್ಲಬ್‌ನಲ್ಲಿ ಡಿ.ಎಂ.ಹೆಗಡೆ ಅವರ 'ಕಾಮಿ ಸ್ವಾಮಿ, ನಿತ್ಯೋತ್ಸವ ನಿತ್ಯಾನಂದರು' ಕೃತಿ ಬಿಡುಗಡೆ ಮಾಡಿ ಮಾತನಾಡಿ, ಖಾದಿ-ಕಾವಿ ಹಾಗೂ ಖಾಕಿ ಧರಿಸುವವರು ಪರಸ್ಪರ ತಮ್ಮನ್ನು ಅಡವಿಟ್ಟುಕೊಂಡಿದ್ದಾರೆ ಎಂದು ಆರೋಪಿಸಿದರು.

ಇಂತಹ ಸಮಾಜದಲ್ಲಿ ನಿತ್ಯಾನಂದ ಪ್ರಕರಣಗಳು ಮರುಕಳಿಸಿದರೆ ಅಚ್ಚರಿಯಿಲ್ಲ ಎಂದ ಅವರು, ಆಶ್ರಮಗಳಿಗೆ ಯಾವುದೇ ಇತಿಹಾಸವಿಲ್ಲ. ಆದ್ದರಿಂದ ಆಶ್ರಮಗಳು ಮೋಜಿನ ರೆಸಾರ್ಟ್‌ಗಳಾಗಿ ಬದಲಾಗಿವೆ. ಇದರೊಂದಿಗೆ ಸ್ವಾಮೀಜಿಗಳ ಅವ್ಯವಹಾರ ಕೂಡ ಹೆಚ್ಚಾಗುತ್ತಿದೆ ಎಂದರು.

ಅದೇ ರೀತಿಯಲ್ಲಿ ಸಚಿವ ರೇಣುಕಾಚಾರ್ಯ ಕೂಡ ನಿತ್ಯಾನಂದನ ಇನ್ನೊಂದು ಮುಖ. ಆದರೆ, ಅವರನ್ನು ಸಚಿವರನ್ನಾಗಿ ಮಾಡಿ ಮಠ ಮಾನ್ಯಗಳೇ ಸರಕಾರಕ್ಕೆ ಶಿಫಾರಸು ಮಾಡಿರುವುದು ನಮ್ಮ ವ್ಯವಸ್ಥೆಯ ದುಸ್ಥಿತಿಗೆ ಉದಾಹರಣೆಯಾಗಿದೆ. ಸರಕಾರಕ್ಕೆ ಸ್ವಲ್ಪ ಮರ್ಯಾದೆ ಇದ್ರೆ ನಿತ್ಯಾನಂದನನ್ನು ಶಾಶ್ವತವಾಗಿ ಗಡಿಪಾರು ಮಾಡಿ ಎಂದು ಆಗ್ರಹಿಸಿದರು.
ಸಂಬಂಧಿತ ಮಾಹಿತಿ ಹುಡುಕಿ