ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನಿತ್ಯಾನಂದ ಅತ್ಯಾಚಾರ ನಡೆಸಿಲ್ಲ: ರಂಜಿತಾ ಸ್ಪಷ್ಟನೆ! (CID, Ranjitha | Nityananda | sex video | Lenin Karuppanan | High court)
Bookmark and Share Feedback Print
 
PTI
ರಾಜ್ಯಾದ್ಯಂತ ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದ ನಿತ್ಯಾನಂದ ಸ್ವಾಮಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತನ್ನ ಮತ್ತು ನಿತ್ಯಾನಂದ ಸ್ವಾಮಿ ನಡುವೆ ಯಾವುದೇ ಅಕ್ರಮ ಸಂಬಂಧ ಇಲ್ಲ, ಅಲ್ಲದೇ ಸ್ವಾಮಿ ಅತ್ಯಾಚಾರ ನಡೆಸಿಲ್ಲ. ಅಷ್ಟೇ ಅಲ್ಲ ಖಾಸಗಿ ಟೆಲಿವಿಷನ್ ಚಾನೆಲ್ ಬಿತ್ತರಿಸಿದ ವೀಡಿಯೋ ಚಿತ್ರಣ ಸಂಪೂರ್ಣ ತಿರುಚಲಾಗಿದೆ ಎಂದು ನಟಿ ರಂಜಿತಾ ಹೇಳಿಕೆ ನೀಡಿದ್ದಾಳೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಪ್ರಕರಣದ ಕುರಿತಂತೆ ರಂಜಿತಾ ಸಿಐಡಿ ಅಧಿಕಾರಿಗಳಿಗೆ ನೀಡಿರುವ ಹೇಳಿಕೆ ಕುರಿತು ಸಿಐಡಿ ಅಧಿಕಾರಿಗಳು ಕೋರ್ಟ್‌ಗೆ ವಿವರಣೆ ನೀಡಿದ್ದು,ನಿತ್ಯಾನಂದ ಸ್ವಾಮಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪವನ್ನು ಆಕೆ ಸಾರಸಗಟಾಗಿ ತಳ್ಳಿಹಾಕಿದ್ದಾರೆ. ಅಷ್ಟೇ ಅಲ್ಲ ವೀಡಿಯೋದಲ್ಲಿ ತೋರಿಸಿರುವ ಮಹಿಳೆಯ ತಾನಲ್ಲ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.

ತನಗೂ ಹಾಗೂ ನಿತ್ಯಾನಂದ ಸ್ವಾಮಿ ನಡುವೆ ಯಾವುದೇ ಲೈಂಗಿಕ ಸಂಬಂಧ ಇಲ್ಲ. ತಾನು ಒಂದು ಅಥವಾ ಎರಡು ಬಾರಿ ನಿತ್ಯಾನಂದ ಕೋಣೆಯೊಳಗೆ ಪ್ರವೇಶಿಸಿರುವುದಾಗಿ ರಂಜಿತಾ ಹೇಳಿರುವುದಾಗಿ ಸಿಐಡಿ ಮೂಲಗಳು ವಿವರಿಸಿದೆ.

ರಾಸಲೀಲೆ ಪುರಾಣದಲ್ಲಿ ನಿತ್ಯಾನಂದ ಮತ್ತು ರಂಜಿತಾ ಒಬ್ಬರಿಗೊಬ್ಬರು ತಬ್ಬಿಕೊಂಡು ಅಸಭ್ಯವಾಗಿ ವರ್ತಿಸುತ್ತಿರುವ ರೀತಿಯ ಭಂಗಿಯಲ್ಲಿನ ವೀಡಿಯೋ ಚಿತ್ರಣವನ್ನು ಖಾಸಗಿ ಟಿವಿ ಚಾನೆಲ್ ವರದಿ ಪ್ರಸಾರ ಮಾಡಿತ್ತು. ಆದರೆ ಇದು ಸಂಪೂರ್ಣ ತಿರುಚಲಾಗಿರುವ ವೀಡಿಯೋ ಚಿತ್ರಣ ಎಂದು ರಂಜಿತಾ ದೂರಿದ್ದಾಳೆ.

ಏತನ್ಮಧ್ಯೆ, ವೀಡಿಯೋ ಚಿತ್ರಣವನ್ನು ಪರಿಶೀಲನೆಗೊಳಪಡಿಸಿದ ವಿಧಿವಿಜ್ಞಾನ ಪ್ರಯೋಗಾಲಯದ ಪರಿಣತರು ಅದು ನಿಜವಾದದ್ದು, ಯಾವುದೇ ರೀತಿಯಲ್ಲಿ ತಿರುಚಿಲ್ಲ ಎಂದು ವರದಿ ನೀಡಿದೆ. ಮತ್ತೊಂದೆಡೆ ರಂಜಿತಾ ಈ ಆರೋಪವನ್ನು ಅಲ್ಲಗಳೆದಿದ್ದಾಳೆ.

ನಿತ್ಯಾನಂದ ಸ್ವಾಮಿಯ ಕಾರಿನ ಮಾಜಿ ಚಾಲಕನಾಗಿದ್ದ ಲೆನಿನ್ ಕರುಪ್ಪನ್ ರಾಸಲೀಲೆಯ ಸಿಡಿಯನ್ನು ಚಾನೆಲ್‌ಗೆ ಬಿಡುಗಡೆ ಮಾಡಿದ್ದ. ಈ ಬಗ್ಗೆ ಚೆನ್ನೈ ಪೊಲೀಸರು ನಿತ್ಯಾನಂದ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಪ್ರಕರಣವನ್ನು ಕರ್ನಾಟಕ ಪೊಲೀಸರಿಗೆ ಹಸ್ತಾಂತರಿಸಿದ್ದರು.

ಹೈಕೋರ್ಟ್ ನೀಡಿರುವ ನಿರ್ದೇಶನದ ಮೇರೆಗೆ ಸಿಐಡಿ ಅಧಿಕಾರಿಗಳು ರಂಜಿತಾಳ ಹೇಳಿಕೆಯನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಅದೇ ರೀತಿ ವಿದೇಶದಲ್ಲಿ ನೆಲೆಸಿರುವ ಇಬ್ಬರು ಮಾಜಿ ಭಕ್ತರ ಹೇಳಿಕೆಯನ್ನು ಪಡೆಯಲು ನಾಲ್ಕು ವಾರಗಳ ಕಾಲಾವಕಾಶ ನೀಡಬೇಕೆಂದು ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಆ ನಿಟ್ಟಿನಲ್ಲಿ ಪ್ರಕರಣದ ಕುರಿತು ಅಮೆರಿಕದಲ್ಲಿ ವಾಸಿಸುತ್ತಿರುವ ನಿತ್ಯ ವಿಮಲಾನಂದ ಮತ್ತು ನಿತ್ಯ ಗೋಪಿಕಾ ಅವರ ಹೇಳಿಕೆಯನ್ನು ಪಡೆಯಲು ಅಮೆರಿಕಕ್ಕೆ ತೆರಳಲು ಕೇಂದ್ರ ಸರಕಾರದ ಅನುಮತಿ ಕೋರಲಾಗುವುದು ಎಂದು ಸಿಐಡಿ ಎಸ್ಪಿ ಕೆ.ಎನ್.ಯೋಗಪ್ಪ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ