ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕುಂಭಾಭಿಷೇಕದಲ್ಲಿ ಮಿಂದೆದ್ದ ಬಿಡದಿಯ ನಿತ್ಯಾನಂದ ಆಶ್ರಮ (Kumbhabhisheka | Nithyananda | Sex Scandal | Ranjitha)
Bookmark and Share Feedback Print
 
ರಂಜಿತಾ ಜೊತೆಗಿನ ಸೆಕ್ಸ್ ಹಗರಣದ ಕಾರಣ ಈಗಷ್ಟೇ ಜೈಲಿನಿಂದ ಮುಕ್ತವಾಗಿರುವ ನಿತ್ಯಾನಂದ ಸ್ವಾಮಿ ಇದೀಗ ತನ್ನ ಮೇಲಿರುವ ಕಳಂಕವನ್ನು ತೊಡೆದುಹಾಕಲು ನಾನಾ ಪ್ರಯತ್ನ ಮಾಡುತ್ತಿದ್ದಾರೆ.

ಇತ್ತೀಚೆಗೆ ಅಗ್ನಿವೃತ್ತದ ನಡುವೆ ಕೂತು ಪರಿಶುದ್ಧವಾಗುವ ಪ್ರಯತ್ನ ಮಾಡಿದ್ದ ನಿತ್ಯಾನಂದ ಪಾದಯಾತ್ರೆ, ಅನ್ನದಾನ ಮತ್ತಿತರ ಹಲವು ಕಾರ್ಯಕ್ರಮಗಳ ಮೂಲಕ ಮತ್ತೆ ತನ್ನ ಭಕ್ತರನ್ನು ಮತ್ತೆ ಒಲಿಸಲು ಪ್ರಯತ್ನಿಸುತ್ತಿದ್ದಾರೆ. ಇದೀಗ ಗುರು ಪೂರ್ಣಿಮೆ ನಿಮಿತ್ತ ಅವರು ತಮ್ಮ ಬಿಡದಿಯ ಆಶ್ರಮದಲ್ಲಿ ಕುಂಭಾಭಿಷೇಕ ಮಾಡಿದರು. ವಿದೇಶೀ ಭಕ್ತರಿಂದ ತುಂಬಿ ಹೋಗಿದ್ದ ಆಶ್ರಮ ಈ ಬಾರಿಯೂ ಸ್ಥಳೀಯ ಭಕ್ತರ ಕೊರತೆಯನ್ನೇ ಎತ್ತಿ ತೋರಿಸಿತು.

21 ಅಡಿ ಎತ್ತರದ ಆತ್ಮ ಲಿಂಗಕ್ಕೆ ಹಾಲು, ಕುಂಕುಮ, ಅರಿಶಿನ, 108 ಗಿಡಮೂಲಿಕೆಗಳು, ಬಣ್ಣ ಬಣ್ಣದ ಹೂಗಳಿಂದ ಅಭಿಷೇಕ ಮಾಡಿದ ಸ್ವತಃ ನಿತ್ಯಾನಂದ ನಂತರ ಆ ಅಭಿಷೇಕದ ನೀರಲ್ಲೇ ಮಿಂದೆದ್ದರು. ಮುಗುಳುನಗುವಿನೊಂದಿಗೆ ಆತ್ಮ ಲಿಂಗಕ್ಕೆ ಅಭಿಷೇಕ ಮಾಡಿದ ನಿತ್ಯಾನಂದರನ್ನು ನೋಡಲು ಸಾವಿರಾರು ಭಕ್ತರು ಸೇರಿದ್ದರು. ಆದರೆ ಇವರಲ್ಲಿ ವಿದೇಶೀಯರು ಹಾಗೂ ತಮಿಳುನಾಡಿನವರೇ ಹೆಚ್ಚಿದ್ದುದು ವಿಶೇಷ. ಈ ಬಾರಿಯೂ ಸ್ಥಳೀಯ ಮಂದಿ ಅಲ್ಲಿ ಕಂಡು ಬರಲಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ