ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಳ್ಳಾರಿ ಯಾತ್ರೆ ಕಾಂಗ್ರೆಸ್ ಪಕ್ಷದೊಳಗಿನ ಪೈಪೋಟಿ ಯಾತ್ರೆ: ಯಡ್ಡಿ (Mining | Reddy brothers | Congress)
Bookmark and Share Feedback Print
 
ಕಳೆದ ಚುನಾವಣೆಯಲ್ಲಿ ದಯನೀಯ ಸೋಲು ಅನುಭವಿಸಿರುವ ಕಾಂಗ್ರೆಸ್ ಪಕ್ಷದ ಕೇವಲ ಶಕ್ತಿ ಪ್ರದರ್ಶನವಿದು ಎಂದು ಬಳ್ಳಾರಿ ಯಾತ್ರೆಯ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿದರು.

ನವದೆಹಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಯಡಿಯೂರಪ್ಪ, ಕಾಂಗ್ರೆಸಿಗರ ನಡುವೆ ತಮ್ಮ ತಮ್ಮ ಶಕ್ತಿ ಪ್ರದರ್ಶನದ ಬಗ್ಗೆ ಹೆಚ್ಚು ಪೈಪೋಟಿ ಇದೆ. ಪಕ್ಷದ ಮುಂದಿನ ನಾಯಕನ ಬಗ್ಗೆ ಅವರೊಳಗೆ ಗೊಂದಲವಿದೆ. ಅದನ್ನು ಪಡೆಯುವ ಸಲುವಾಗಿ ಅವರೊಳಗೇ ಅವರು ಪೈಪೋಟಿಗಿಳಿದಿದ್ದಾರೆ. ಇದರಿಂದ ಸರ್ಕಾರಕ್ಕೇನೂ ಧಕ್ಕೆಯಾಗದು ಎಂದರು.

ಕಾಂಗ್ರೆಸಿಗರಿಗೆ ನಿಜಕ್ಕೂ ಗಣಿಗಾರಿಕೆ ವಿರುದ್ಧ ಹೋರಾಡುವ ಉದ್ದೇಶವಿದ್ದರೆ ನೇರವಾಗಿ ದೆಹಲಿಗೇ ಪಾದಯಾತ್ರೆ ಮಾಡಿ ಕೇಂದ್ರ ಸರ್ಕಾರದ ಗಮನ ಸೆಳೆಯಬೇಕಿತ್ತು. ಅದು ಬಿಟ್ಟು ಬಳ್ಳಾರಿಗೆ ಪಾದಯಾತ್ರೆ ಮಾಡಿದರೆ ಏನೂ ಪ್ರಯೋಜನವಾಗದು ಎಂದು ಯಡಿಯೂರಪ್ಪ ಹೇಳಿದರು.

ಅಕ್ರಮ ಗಣಿಗಾರಿಕೆಯ ತನಿಖೆಯನ್ನು ಸಿಬಿಐಗೆ ಒಪ್ಪಿಸುವ ಮೂಲಕ ಪ್ರಕರಣದ ತನಿಖೆಯನ್ನು ಇನ್ನೂ ನಿಧಾನಗೊಳಿಸುವುದಷ್ಟೇ ಅವರ ಉದ್ದೇಶ. ಖಂಡಿತವಾಗಿಯೂ ಪಾದಯಾತ್ರೆಯಲ್ಲಿ ಇವರು ಜನರಿಂದ ಛೀಮಾರಿ ಹಾಕಿಸಿಕೊಳ್ಳುತ್ತಾರೆ. ಅವರ ನಿಜವಾದ ಬಣ್ಣ ಬಯಲಾಗಲಿದೆ ಎಂದು ಯಡಿಯೂರಪ್ಪ ಲೇವಡಿ ಮಾಡಿದರು.
ಸಂಬಂಧಿತ ಮಾಹಿತಿ ಹುಡುಕಿ