ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗೋಮಾಳ ವಿಷಯದಲ್ಲಿ ಅಕ್ರಮ-ಸಕ್ರಮ ಕೈಬಿಡಿ: ಸಿರಿಗೆರೆ ಶ್ರೀ (Sirigere mata | Mysore | Gomala | Forest | BJP | Karnataka)
Bookmark and Share Feedback Print
 
ಗೋಮಾಳಗಳ ವಿಚಾರದಲ್ಲಿ ಸರಕಾರ ಅಕ್ರಮ ಸಕ್ರಮ ನೀತಿಯನ್ನು ಕೈಬಿಡಬೇಕು ಎಂದು ಸಿರಿಗೆರೆ ಮಠದ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮನವಿ ಮಾಡಿಕೊಂಡಿದ್ದಾರೆ.

ತಾಲೂಕಿನ ಸಿರಿಗೆರೆಯಲ್ಲಿ ವೃಕ್ಷಾರೋಪಣ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಗೋಮಾಳಗಳು ಈಗೀಗ ಮನುಷ್ಯ ಮಾಳಗಳಾಗುತ್ತಿವೆ. ಮಾನವನೇ ಅದನ್ನು ಮೇಯುತ್ತಿದ್ದಾನೆ. ಭೂಮಿಯಲ್ಲಿ ಪ್ರಜೆಗಳಿಗೆ ಹೇಗೆ ಬದುಕುವ ಅಧಿಕಾರವಿದೆಯೋ ಹಾಗೆಯೇ ಪ್ರಾಣಿಗಳಿಗೂ ಅಧಿಕಾರವಿದೆ. ಆದರೆ ಅವುಗಳು ಬದುಕುವ ಅಧಿಕಾರವನ್ನು ಮನುಷ್ಯ ಕಿತ್ತುಕೊಳ್ಳುತ್ತಿದ್ದಾನೆ ಎಂದು ಖೇದ ವ್ಯಕ್ತಪಡಿಸಿದರು.

ಪುಣ್ಯದ ಫಲ ನಿರೀಕ್ಷಿಸುವ ಮನುಷ್ಯ ಪುಣ್ಯ ಕಾರ್ಯ ಮಾಡಲು ಮಾತ್ರ ಮುಂದಾಗುವುದಿಲ್ಲ. ಪಾಪದ ಫಲ ಬೇಡವಾದರೂ ಸದಾ ಮಾಡುವುದು ಪಾಪ ಕಾರ್ಯಗಳನ್ನೇ. ಮೈಸೂರು ಮಹಾರಾಜರ ಆಳ್ವಿಕೆ ಕಾಲದಲ್ಲಿ ಒಬ್ಬರೇ ಮುಖ್ಯ ಅರಣ್ಯ ಸಂರಕ್ಷಣಾಕಾರಿಯಿದ್ದರು. ಆಗ ರಾಜ್ಯದಲ್ಲಿ ಶೇ.20ರಷ್ಟು ಅರಣ್ಯವಿತ್ತು. ಈಗ ಸಾಕಷ್ಟು ಅರಣ್ಯಾಧಿಕಾರಿಗಳಿದ್ದಾರೆ. ಆದರೂ ಅರಣ್ಯಗಳ ಪ್ರಮಾಣ ಶೇ.18ಕ್ಕೆ ಕುಸಿದಿದೆ. ಅರಣ್ಯ ಕಬಳಿಸುವ ಮಂದಿ ಹೆಚ್ಚುತ್ತಿದ್ದಾರೆ ಎಂದು ವಿಷಾದಿಸಿದರು.
ಸಂಬಂಧಿತ ಮಾಹಿತಿ ಹುಡುಕಿ