ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕಾಂಗ್ರೆಸ್ ಹೇಳಿದಂತೆ ಕುಣಿಯಲು ಆಗಲ್ಲ: ಯಡಿಯೂರಪ್ಪ (Congress | BJP | Yeddyurappa | CBI | UPA)
Bookmark and Share Feedback Print
 
ಅಕ್ರಮ ಗಣಿಗಾರಿಕೆ ತಡೆಗಟ್ಟುವ ನಿಟ್ಟಿನಲ್ಲಿ ರಫ್ತು ಪರವಾನಿಗೆ ನಿಷೇಧಿಸಲು ಇನ್ನೆರಡು ದಿನದಲ್ಲಿ ಆದೇಶ ಹೊರಡಿಸುತ್ತೇನೆ. ರಫ್ತು ನಿಷೇಧಿಸಿದ ನಂತರ ಸಾಗಾಣಿಕೆಗೆ ಅವಕಾಶವಿಲ್ಲ. ಇದನ್ನು ಕಾಂಗ್ರೆಸ್ಸಿಗರು ಅರ್ಥ ಮಾಡಿಕೊಳ್ಳಬೇಕು. ತನಗೆ ಕಾಂಗ್ರೆಸಿಗರು ಹೇಳಿದಂತೆ ಕುಣಿಯಲು ಸಾಧ್ಯವಿಲ್ಲ. ಸಿಬಿಐಗೆ ವಹಿಸಿ ಎಂದಾಕ್ಷಣಕ್ಕೆ ಅದನ್ನು ಪಾಲಿಸಲು ಅವರೇನು ಸರ್ವಾಧಿಕಾರಿಗಳೇ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಒಂದೆಡೆ ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸಿಗರು, ಮತ್ತೊಂದೆಡೆ ರಫ್ತು ನಿಷೇಧವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲು ಏರುವುದಾಗಿ ಹೇಳುತ್ತಿದ್ದಾರೆ. ಅದಿರು ಕಳ್ಳ ಸಾಗಣೆಯನ್ನು ತಡೆಗಟ್ಟಲು ಕಾಂಗ್ರೆಸಿಗರು ಸಿದ್ದರಿಲ್ಲ ಎಂದು ದೂರಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸಿಗರಿಗೆ ರಾಜ್ಯದ ಸಂಪತ್ತಿನ ರಕ್ಷಣೆಗಿಂತಲೂ ಕಾಂಗ್ರೆಸ್ ಗಣಿಧಣಿಗಳ ಹಿತ ಕಾಯುವುದೇ ಮುಖ್ಯವಾಗಿದೆ. ಅದಕ್ಕಾಗಿಯೇ ಅವರು ಸಿಬಿಐ ತನಿಖೆಗಾಗಿ ಒತ್ತಾಯಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಸಿಬಿಐ ತನಿಖೆ ನಡೆದರೆ ವರದಿ ಬರಲು ಕನಿಷ್ಠ ಮೂರು ವರ್ಷ ಬೇಕು. ಮತ್ತು ಕೇಂದ್ರ ಸರಕಾರದ ಪ್ರಭಾವ ಬಳಸಿ ಪಾದಯಾತ್ರೆ ನಡೆಸುತ್ತಿರುವವರ ರಕ್ಷಣೆ ಮಾಡುವ ಹುನ್ನಾರ ಇದೆ ಎಂದರು.

ಅದಿರು ರಫ್ತು ಕುರಿತಂತೆ ಸಂಸತ್‌ನಲ್ಲಿ ಚರ್ಚೆಯಾಗಬೇಕಿದೆ. ಹಳೆ ಕಾಲದ ಕಾಯಿದೆಯಿಂದಾಗಿ ಸಂಪತ್ತಿನ ಲೂಟಿಯಾಗುತ್ತಿದೆ. ರಾಜ್ಯದ ಅದಿರು ಕಡಿಮೆ ಬೆಲೆಗೆ ರಫ್ತುಗೊಂಡು ಅತ್ಯಧಿಕ ಬೆಲೆಯಲ್ಲಿ ಸ್ಟೀಲ್ ಆಮದು ಮಾಡಿಕೊಳ್ಳಲಾಗುತ್ತಿದೆ. ಇದನ್ನು ತಪ್ಪಿಸಲು ಮೌಲ್ಯವರ್ಥಿತ ಪದ್ದತಿ ಜಾರಿಗೆ ತರಬೇಕು ಎಂದು ಪ್ರತಿಪಾದಿಸಿದರು.
ಸಂಬಂಧಿತ ಮಾಹಿತಿ ಹುಡುಕಿ