ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಏನ್ ಮಾಡ್ತೇನೆ ಅಂತ ಕಾದು ನೋಡಿ: ಯಡಿಯೂರಪ್ಪ (Yeddyurappa | BJP | Congress | Bharadwaj | JDS)
Bookmark and Share Feedback Print
 
ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಸೇರಿದಂತೆ ಎಲ್ಲಾ ರೀತಿಯ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಲು ನಿರ್ಧರಿಸಿದ್ದೇನೆ. ಅದಕ್ಕಾಗಿ ಎಲ್ಲಾ ತ್ಯಾಗಕ್ಕೂ ಸಿದ್ದ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡಿದ್ದ ಅವರು, ಅಕ್ರಮ ಗಣಿಗಾರಿಕೆ ತಡೆಯಲು ಕೈಗೊಂಡಿರುವ ನಿರ್ಧಾರ ಮತ್ತು ಅದರ ವಿವರಗಳನ್ನು ಬಿಚ್ಚಿಟ್ಟರು. ಆ ಹಿನ್ನೆಲೆಯಲ್ಲಿ ಅದಿರು ರಫ್ತು ಮತ್ತು ಸಾಗಣೆ ನಿರ್ಬಂಧಿಸಿ ಗುರುವಾರವೇ ಆದೇಶ ಹೊರಡಿಸಿರುವುದಾಗಿ ತಿಳಿಸಿದರು.

ಇದು ರೆಡ್ಡಿಗಳ ವಿರುದ್ಧವಾಗಲಿ ಅಥವಾ ಕಾಂಗ್ರೆಸ್ ನಾಯಕರ ವಿರುದ್ಧ ಮಾಡುತ್ತಿರುವ ಹೋರಾಟ ಅಲ್ಲ, ಎಲ್ಲವನ್ನೂ ಯೋಚಿಸಿ, ತಜ್ಞರೊಂದಿಗೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಅಕ್ರಮ ಗಣಿಗಾರಿಕೆ ಸಂಬಂಧ ಲೋಕಾಯುಕ್ತರು ನೀಡಿರುವ ವರದಿಯಲ್ಲಿ ಹಿಂದಿನ ಮುಖ್ಯಮಂತ್ರಿ ಧರಂಸಿಂಗ್ ಅವರ ಕಾಲದಲ್ಲಿ ಪರ್ಮಿಟ್ ನೀಡಿದಾಗ ಬೊಕ್ಕಸಕ್ಕೆ ಆಗಿರುವ 20 ಕೋಟಿ ರೂಪಾಯಿ ನಷ್ಟವನ್ನು ಧರಂ ಸಿಂಗ್ ಅವರಿಂದಲೇ ಪಡೆಯಬೇಕೆಂದು ಉಲ್ಲೇಖಿಸಿದ್ದಾರೆ. ಈ ಅಂಶವನ್ನು ರಾಜ್ಯಪಾಲರು ವಾಪಸ್ ಪಡೆದಿದ್ದಾರೆ.

ರಾಜ್ಯಪಾಲರ ಈ ಕ್ರಮ ಕಾನೂನು ಬಾಹಿರ. ಈ ಬಗ್ಗೆ ರಾಷ್ಟ್ರಪತಿಗಳಿಗೂ ದೂರು ನೀಡುತ್ತೇನೆ. ಅಗತ್ಯಬಿದ್ದರೆ ಸುಪ್ರೀಂಕೋರ್ಟ್‌ಗೆ ಹೋಗಲು ಚಿಂತನೆ ನಡೆಸಲಾಗಿದೆ ಎಂದು ಯಡಿಯೂರಪ್ಪ ಹೇಳಿದರು. ಆಡಳಿತದಲ್ಲಿ ಸಂಪೂರ್ಣ ಸುಧಾರಣೆ ಮಾಡುತ್ತೇನೆ. ಎರಡು ವಾರಗಳ ಕಾಲ ಕಾಯಿರಿ ಏನು ಮಾಡುತ್ತೇನೆ ಎಂದು ನೋಡುವಿರಿ ಎಂದು ಕುತೂಹಲ ಮೂಡಿಸಿದರು.

ಅಕ್ರಮ ಗಣಿಗಾರಿಕೆ ತಡೆಯಲು ಕೈಗೊಂಡಿರುವ ಎಲ್ಲಾ ಕ್ರಮಗಳಿಗೂ ಪಕ್ಷದ ವರಿಷ್ಠರ ಬೆಂಬಲ ಇದೆ. ನಾನು ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸಭೆಗೆ ಹೋಗುವ ಮುನ್ನ ಪಕ್ಷದ ಹಿರಿಯ ಮುಖಂಡರೊಂದಿಗೆ ಚರ್ಚಿಸಿ ನನ್ನ ನಿರ್ಧಾರವನ್ನು ತಿಳಿಸಿ ಒಪ್ಪಿಗೆ ಪಡೆದಿದ್ದೇನೆ.

ಅಕ್ರಮ ಅದಿರು ಸಾಗಣೆ ತಡೆಗೆ ಬಾರ್ ಕೋಡ್ ವ್ಯವಸ್ಥೆ, ಪರ್ಮಿಟ್‌ಗಳ ಬಳಕೆಗೆ ಒಂದು ವಾರ ಮಾತ್ರ ಅವಕಾಶ, ಲಾರಿಗಳ ಮೇಲೆ ನಿಗಾ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಅದಿರು ರಫ್ತು ಸಂಪೂರ್ಣ ನಿಷೇಧ-ಸಿಎಂ
ಸಂಬಂಧಿತ ಮಾಹಿತಿ ಹುಡುಕಿ