ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕೇಂದ್ರ-ರಾಜ್ಯ ಸರಕಾರ ಚರ್ಚಿಸಿ ಸಮಸ್ಯೆ ಬಗೆಹರಿಸಲಿ: ರೇವಣ್ಣ (BJP | Congress | JDS | Yeddyurappa | Revanna,)
Bookmark and Share Feedback Print
 
ಕೇಂದ್ರದಲ್ಲಿ ಕಾಂಗ್ರೆಸ್, ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ಇಬ್ಬರೂ ಕಚ್ಚಾಡುವ ಬದಲು ಪರಸ್ಪರ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಲಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಸಲಹೆ ನೀಡಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ಸದಾ ಟೀಕಾಪ್ರಹಾರ ನಡೆಸುತ್ತಿದ್ದ ರೇವಣ್ಣ, ಸುದ್ದಿಗೋಷ್ಠಿಯಲ್ಲಿ ಅವರ ಬಗ್ಗೆ ದಯಾಮಯಿಯಾಗಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತು. 'ಸಿಎಂ ಅಂದ್ರೆ ಈ ನಾಡಿನ ಐದೂವರೆ ಕೋಟಿ ಜನರ ಪ್ರಭು ಇದ್ದಂಗೆ. ಪಾಪ, ಯಡಿಯೂರಪ್ಪ ಒಬ್ರೇ ಏನ್ ಮಾಡ್ತಾರೆ ಹೇಳಿ' ಎಂದು ಅವರ ಬಗ್ಗೆ ಅನುಕಂಪವನ್ನು ತೋರಿದರು.

ಗಣಿ ಬಗ್ಗೆ ಸದನದಲ್ಲಿ ಹೋರಾಡಿದ್ದೇವೆ. ಕಾಂಗ್ರೆಸ್‌ಗೆ ಸಾಥ್ ನೀಡಿದ್ದೇವೆ. ಈಗಲೂ ಅದೇ ವಿಷಯ ಹಿಡಿದು ಜಗ್ಗಾಡಿದರೆ ಹೇಗೆ? ಕೇಂದ್ರ ಸರಕಾರ ಕುಳಿತಲ್ಲೇ ಎಲ್ಲ ಮಾಹಿತಿ ಪಡೆದು ಕ್ರಮ ಕೈಗೊಳ್ಳಬಹುದು. ಮನಸ್ಸು ಮಾಡಿದರೆ ಸಿಬಿಐ ತನಿಖೆಯನ್ನೂ ಮಾಡಬಹುದು. ಪಾದಯಾತ್ರೆ ಮಾಡುತ್ತಿರುವ ಕಾಂಗ್ರೆಸ್‌ನವರು ಇಷ್ಟು ಅರ್ಥ ಮಾಡಿಕೊಂಡರೆ ಸಾಕು ಎಂದರು.

ರಾಜ್ಯ ಸರಕಾರ ಕೂಡ ಸಿಬಿಐ ತನಿಖೆಗೆ ಜಗ್ಗಾಟ ನಡೆಸಬಾರದು. ಯಾರ ಮುಲಾಜಿಗೂ ಒಳಗಾಗದೆ ಗಣಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಇದರಲ್ಲಿ ಕಳೆದುಕೊಳ್ಳೋದು ಏನಿಲ್ಲ. ಉಪ್ಪು ತಿಂದವರು ನೀರು ಕುಡೀತಾರೆ ಅಷ್ಟೆ. ಅದಕ್ಕೆ ನಾವೇನ್ ಮಾಡಕ್ಕಾಗುತ್ತೆ? ಸಿಎಂ ಯಡಿಯೂರಪ್ಪ ಅವರೇ ಸದನದಲ್ಲಿ 1.5 ಲಕ್ಷ ಟನ್ ಅದಿರು ಅನಧಿಕೃತವಾಗಿ ಸಾಗಾಣಿಕೆಯಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಅದರಲ್ಲಿ ಮತ್ತೆ ಪ್ರಶ್ನೆ ಮಾಡುವುದರಲ್ಲಿ ಅರ್ಥವಿಲ್ಲ. ಈಗ ಕ್ರಮ ಆಗಬೇಕಷ್ಟೆ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ