ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಫ್ತು ನಿಷೇಧದಿಂದ ಕಾಂಗ್ರೆಸ್‌ಗೆ ದಿಗಿಲು: ಜನಾರ್ದನ ರೆಡ್ಡಿ (Janardana Reddy | BJP | Yeddyurappa | Congress | KPCC)
Bookmark and Share Feedback Print
 
ರಾಜ್ಯದಿಂದ ಬೇರೆಡೆ ಅದಿರು ಸಾಗಣೆಗೆ ನಿಷೇಧಕ್ಕೆ ಆದೇಶ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಹೇಳಿದ್ದು ನಾವೇ ಎಂದು ಎಂದು ಸಚಿವ ಜನಾರ್ದನರೆಡ್ಡಿ ಹೇಳಿದರು.

ಪಟ್ಟಣದ ನಿಟ್ಟೂರು ನರಸಿಂಹಮೂರ್ತಿ ಬಯಲು ಜಾಗದಲ್ಲಿ ಏರ್ಪಡಿಸಿದ್ದ ಜಿಲ್ಲಾ ಬಿಜೆಪಿ ಸ್ವಾಭಿಮಾನ ಯಾತ್ರೆಯಲ್ಲಿ ಮಾತನಾಡಿದ ಅವರು, ಅದಿರು ರಫ್ತು ನಿಷೇಧದಿಂದ ಅನ್ಯಾಯವಾಗುತ್ತಿದೆ ಎಂದು ಹೇಳುತ್ತಿರುವವರು ಕಾಂಗ್ರೆಸ್ ನಾಯಕರು. ಆದರೆ ಸರಕಾರದ ಆದೇಶದಿಂದ ನಾವು ವಿಚಲಿತರಾಗಿಲ್ಲ. ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರೇ ಈಗ ದಿಗಿಲುಗೊಂಡಿದ್ದಾರೆ ಎಂದರು.

ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಧೀರೂಭಾಯಿ ಅಂಬಾನಿ ಇಂದು ಜಗತ್ತಿನ ಶ್ರೀಮಂತನಾಗಿರುವ ಉದಾಹರಣೆ ಇರುವಾಗ ಒಬ್ಬ ಪೊಲೀಸ್ ಪೇದೆ ಮಗ ಕೋಟ್ಯಾಧಿಪತಿ ಆಗುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪಾದಯಾತ್ರೆಗೆ ಮುಂದಾಗಿದ್ದಾರೆ. ಕುರ್ಚಿ ಆಸೆಯಿಂದ ನಾಯಕರು ನಡೆಸುತ್ತಿರುವ ತಂತ್ರಗಾರಿಕೆಯೇ ಹೊರತು ನಾಡ ರಕ್ಷಣೆಗಾಗಿ ಅಲ್ಲ ಎಂದು ಲೇವಡಿ ಮಾಡಿದರು.
ಸಂಬಂಧಿತ ಮಾಹಿತಿ ಹುಡುಕಿ