ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿ ಸಮಾವೇಶಕ್ಕೆ ಗೊತ್ತು ಗುರಿ ಇಲ್ಲ: ಕಾಂಗ್ರೆಸ್ (BJP | Congress | CBI | Yeddyurappa | Shiv kumar | JDS)
Bookmark and Share Feedback Print
 
ಆಡಳಿತಾರೂಢ ಬಿಜೆಪಿ ಸರಕಾರ ದಾವಣಗೆರೆಯಲ್ಲಿ ನಡೆಸಿರುವ ಸಮಾವೇಶ ಗೊತ್ತು ಗುರಿ ಇಲ್ಲದ್ದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಬೆಂಗಳೂರಿನಿಂದ ಬಳ್ಳಾರಿವರೆಗೆ ಕೈಗೊಂಡಿರುವ ನಾಡ ರಕ್ಷಣಾ ನಡಿಗೆಯ 9ನೆ ದಿನವಾದ ಸೋಮವಾರ ಹಿರಿಯೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಸರಕಾರದ ಸಮಾವೇಶದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಾದಯಾತ್ರೆಯ ವರ್ಚಸ್ಸು ದಿನೇ, ದಿನೇ ಹೆಚ್ಚಾಗುತ್ತಿರುವುದರಿಂದ ಕಂಗೆಟ್ಟಿರುವ ಬಿಜೆಪಿ ಸರಕಾರ ಅರ್ಥವಿಲ್ಲದ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಸರಕಾರದ ಅಧಿಕಾರಿಗಳೇ ಈ ಸಮಾವೇಶ ನಡೆಸುತ್ತಿದ್ದಾರೆ ಎಂದು ದೂರಿದರು.

ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆಗೆ ವಹಿಸಿ, ರಾಜ್ಯದ ಸಂಪತ್ತು ಲೂಟಿ ನಿಲ್ಲಿಸಿ ಎಂಬ ಅಜೆಂಡಾದೊಂದಿಗೆ ಕಾಂಗ್ರೆಸ್ ಪಕ್ಷ ಅರ್ಥಪೂರ್ಣ ಪಾದಯಾತ್ರೆ ನಡೆಸುತ್ತಿದೆ. ಆದರೆ, ಯಾವುದೇ ಗೊತ್ತು ಗುರಿ ಇಲ್ಲದೆ, ಸ್ಪಷ್ಟ ನಿರ್ಧಾರವಿಲ್ಲದೆ ದಾವಣೆಗೆರೆಯಲ್ಲಿ ಬಿಜೆಪಿ ದಿಢೀರ್ ಆಗಿ ಸಮಾವೇಶ ನಡೆಸಿರುವುದು ಸರಕಾರದ ಆತಂಕವನ್ನು ಬಿಂಬಿಸುತ್ತದೆ ಎಂದರು.

ಜೆಡಿಎಸ್ ಜತೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವುದಾದರೆ ನಮ್ಮ ಅಭ್ಯಂತರವಿಲ್ಲ. ಜೆಡಿಎಸ್‌ನೊಂದಿಗಾಗಲಿ, ಯಾರೊಂದಿಗಾದರೂ ಮೈತ್ರಿ ಮಾಡಿಕೊಳ್ಳಲಿ. ನಮ್ಮ ಗುರಿ ಒಂದೇ ಲೂಟಿ ಹಠಾವೋ, ಕರ್ನಾಟಕ ಬಚಾವೋ ಎಂದು ಡಿಕೆಶಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ