ದೊಂಬರಾಟದಲ್ಲಿ ತೊಡಗಿದ ಕಾಂಗ್ರೆಸಿಗರನ್ನು ಅಷ್ಟು ಸುಲಭಕ್ಕೆ ಬಿಡುವುದಿಲ್ಲ. ಅವರ ಬಂಡವಾಳ ಬಯಲು ಮಾಡುವವರೆಗೆ ವಿರಮಿಸುವುದಿಲ್ಲ ಎಂದು ಗುಡುಗಿದರು.
ಪಾದಯಾತ್ರೆ ನೆಪದಲ್ಲಿ ರಾಜ್ಯದ ಶಾಂತಿ ಕದಡಲು ಕಾಂಗ್ರೆಸಿಗರು ಹುನ್ನಾರ ನಡೆಸಿದ್ದಾರೆ. ಅದಕ್ಕೆ ಆಸ್ಪದ ಕೊಡುವುದಿಲ್ಲ. ಅವರ ಪಾದಯಾತ್ರೆ ಮುಗಿಯಲಿ. ನನ್ನ ಯಾತ್ರೆ ಆರಂಭವಾಗುತ್ತದೆ. ಖುದ್ದು ನಾನೇ ಪ್ರತಿ ಜಿಲ್ಲೆಗೆ ಹೋಗುತ್ತೇನೆ. ಸಚಿವರು, ಶಾಸಕರು ಸಾಥ್ ನೀಡುತ್ತಾರೆ. ಪ್ರತಿ ಜಿಲ್ಲೆಯಲ್ಲಿ 1 ಲಕ್ಷ ಜನ ಸೇರಿಸುತ್ತೇನೆ. 2 ವರ್ಷ ಅವಧಿಯಲ್ಲಿ ಸರಕಾರ ಏನು ಮಾಡಿದೆ ? ಮುಂದೇನು ಮಾಡಲಿದೆ ಎಂಬುದರ ಮನವರಿಕೆ ಮಾಡಿಸುತ್ತೇನೆ ಎಂದು ಹೇಳಿದರು.
'ಪಾದಯಾತ್ರೆ ಮೂಲಕ ಜನರ ಮನಸ್ಸು ಬೇರೆಡೆ ತಿರುಗಿಸುವ ಹಾಗೂ ಸರಕಾರದ ಸಾಧನೆ ಮಸುಕು ಮಾಡುವ ಕಾಂಗ್ರೆಸ್ ಆಟ ನಮ್ಮ ಮುಂದೆ ನಡೆಯದು. ಸೊಂಟದ ಕೆಳಗೆ ಮಾತನಾಡುವ ಅವರ ನಡವಳಿಕೆಗೆ ನನ್ನ ರಕ್ತ ಕುದಿಯುತ್ತಿದೆ. ಈ ರಾಜ್ಯದಲ್ಲಿ ಮತ್ತೆಂದೂ ಆ ಪಕ್ಷಕ್ಕೆ ಹೆಜ್ಜೆ ಊರಲು ಅವಕಾಶ ನೀಡುವುದಿಲ್ಲ' ಎಂದು ಗುಡುಗಿದರು.