ರಾಜ್ಯದಲ್ಲಿ 3 ಸಾವಿರ ಠಾಣೆ ಅಗತ್ಯವಿದೆ: ಅಜಯ್ ಕುಮಾರ್ ಸಿಂಗ್
ಬಾಗಲಕೋಟ, ಮಂಗಳವಾರ, 3 ಆಗಸ್ಟ್ 2010( 16:31 IST )
ರಾಜ್ಯದಲ್ಲಿ ಒಂದು ಸಾವಿರ ಪೊಲೀಸ್ ಠಾಣೆಗಳ ಅವಶ್ಯಕತೆಯಿದ್ದು, ಈವರೆಗೆ 912 ಠಾಣೆಗಳನ್ನು ಸ್ಥಾಪಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಜಯ್ ಕುಮಾರ ಸಿಂಗ್ ತಿಳಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ವರ್ಷ 25 ಠಾಣೆಗಳಿಗೆ ಮಂಜೂರು ನೀಡಲಾಗಿದೆ. ಈ ವರ್ಷ 30 ಸ್ಟೇಶನ್‌ಗಳನ್ನು ಸ್ಥಾಪಿಸಲಾಗು ವುದು. ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ, ವಸತಿಗೃಹಗಳು ಸೇರಿದಂತೆ ಮೂಲ ಸೌಕರ್ಯ ಒದಗಿಸಲಾಗುವುದು ಎಂದರು.
ಹೊಸ ವರ್ಗಾವಣೆ ನೀತಿ ಮೂಲಕ 300 ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಈ ವಿಷಯದಲ್ಲಿ ಸರಕಾರದೊಂದಿಗೆ ಸಂಘರ್ಷವಿಲ್ಲ. ಇಲಾಖೆಯ ಕಾರ್ಯನಿರ್ವಹಣೆಗೆ ಸರಕಾರ ಸ್ವಾತಂತ್ರ್ಯ ನೀಡಿದೆ. ಸಿಐಡಿ ತನಿಖೆಗಳು ತೀವ್ರ ಗತಿಯಲ್ಲಿ ನಡೆಯುತ್ತಿವೆ. ಸಿಐಡಿ ಘಟಕದ ಕಾರ್ಯ ತೃಪ್ತಿ ನೀಡಿದೆ. ಸೈಬರ್ ಅಪರಾಧ ತಡೆಗೆ ಅಧಿಕಾರಿಗಳಿಗೆ ತರಬೇತಿ ಒದಗಿಸಲಾಗಿದೆ. ರಾಜ್ಯದಲ್ಲಿ ನಡೆಯುವ ಸಮಾವೇಶಗಳಿಗೆ ಅಗತ್ಯ ಬಂದೋಬಸ್ತ್ ಕಲ್ಪಿಸಲಾಗಿದೆ. ಸಮಾವೇಶದ ಸಂದರ್ಭದಲ್ಲಿ ಗೊಂದಲ ಉಂಟಾದರೂ ಶಾಂತಿ, ಸುವ್ಯವಸ್ಥೆ ಕಾಪಾಡುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.
ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಧಿಕಾರಿಗಳ ಸಮಸ್ಯೆ ನಡೆಸಿ ಕಾನೂನು ಸುವ್ಯವಸ್ಥೆ ಬಲಪಡಿಸುವ ಬಗ್ಗೆ ಸಲಹೆ ಪಡೆಯಲಾಗಿದೆ. ಕಳ್ಳತನವಾದ ಪ್ರಕರಣಗಳನ್ನು ವಾಪಸ್ ಮಾಡುವಲ್ಲಿ ಜಿಲ್ಲೆ ನೂರಕ್ಕೆ ನೂರರಷ್ಟು ಸಾಧನೆ ಮಾಡಿದೆ. ದೂರುದಾರರಿಗೆ ಪ್ರಕರಣಗಳ ಬಗ್ಗೆ ಮಾಹಿತಿ ನೀಡಲು ಪ್ರತಿ ತಿಂಗಳ ಮೂರನೇ ಭಾನುವಾರ ದೂರುದಾರರ ದಿನ ಆಚರಿಸಲಾಗುತ್ತಿದೆ ಎಂದರು.