ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅದಿರು ರಫ್ತು ನಿಷೇಧ ಅಧಿಕಾರ ರಾಜ್ಯಕ್ಕಿಲ್ಲ: ಕೇಂದ್ರ ತಿರುಗೇಟು (BJP | Congress | UPA | Handique | Mining)
Bookmark and Share Feedback Print
 
ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಕೆಸರೆಚಾಟ ನಡೆಯುತ್ತಿದ್ದರೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದಲ್ಲಿ ಅದಿರು ರಫ್ತು ನಿಷೇಧಿಸಿ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದರು. ಆದರೆ ರಾಜ್ಯದ ಕ್ರಮದ ವಿರುದ್ಧ ಕೇಂದ್ರ ಸರಕಾರ ಅಪಸ್ವರ ಎತ್ತಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಅಕ್ರಮ ಅದಿರು ಸಾಗಾಣೆಕೆಗೆ ಸಂಬಂಧಿಸಿದಂತೆ ಕೇಂದ್ರದ ಸೂಚನೆ ಮೇರೆಗೆ ಸಮನ್ವಯ ಸಮಿತಿ ರಚಿಸಿರುವುದು ಸ್ವಾಗತಾರ್ಹ ವಿಚಾರ. ಆದರೆ ಅದಿರು ರಫ್ತು ನಿಷೇಧ ಸರಿಯಲ್ಲ, ಅದು ರಾಜ್ಯದ ವ್ಯಾಪ್ತಿಗೆ ಬರುವುದಿಲ್ಲ. ಅದಿರು ರಫ್ತು ನಿಷೇಧದ ಅಧಿಕಾರ ಕೇಂದ್ರ ಮಾತ್ರ ಎಂದು ಕೇಂದ್ರ ಸಚಿವ ಬಿ.ಕೆ.ಹಂಡಿಕ್ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಅಕ್ರಮ ಗಣಿಗಾರಿಕೆ ತನಿಖೆಗೆ ವಿಶೇಷ ತನಿಖಾ ದಳ ರಚಿಸಬೇಕು. ಅದಿರು ಉತ್ಪಾದನೆ, ಸಾಗಾಣೆ ರಾಜ್ಯಕ್ಕೆ ಬಿಟ್ಟ ವಿಷಯ. ಅಷ್ಟೇ ಅಲ್ಲ, ಅಕ್ರಮ ಗಣಿಗಾರಿಕೆ ತನಿಖೆಗೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಸಂಸ್ಥೆ ಸಹಕಾರ ಪಡೆಯುವಂತೆ ಹಂಡಿಕ್ ಪತ್ರದಲ್ಲಿ ಸಲಹೆ ನೀಡಿದ್ದಾರೆ.

ಆದರೆ ರಾಜ್ಯಕ್ಕೆ ಅದಿರು ರಫ್ತು ನಿಷೇಧಿಸುವ ಅಧಿಕಾರವಿಲ್ಲ. ಆಮದು ಮತ್ತು ರಫ್ತು ಕುರಿತು ತೀರ್ಮಾನ ಮಾಡುವ ಪರಮಾಧಿಕಾರ ಇರುವುದು ಕೇಂದ್ರಕ್ಕೆ ಮಾತ್ರ ಎಂದು ತಿಳಿಸಿದ್ದಾರೆ. ಹಾಗಾಗಿ ಕರ್ನಾಟಕ ಸರಕಾರ ತನ್ನ ವ್ಯಾಪ್ತಿ ಮೀರಿ ವರ್ತಿಸಿದೆ ಎಂದು ಹಂಡಿಕ್ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗಣಿಗಾರಿಕೆ ನಿಯಂತ್ರಣ ರಾಜ್ಯದ ಹೊಣೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವಾಲಯ ಸ್ಪಷ್ಟಪಡಿಸಿದೆ. ಆದರೆ, ಅದಿರು ರಫ್ತು ನಿಷೇಧಿಸುವ ಅಧಿಕಾರ ಇರುವುದು ಕೇಂದ್ರಕ್ಕೆ ಮಾತ್ರ. ಗಣಿಗಾರಿಕೆ, ಖನಿಜ ಸಂಪತ್ತು ಸಾಗಾಣೆ, ಪರವಾನಿಗೆ ವಿತರಣೆ ಮೊದಲಾದ ವಿಷಯಗಳನ್ನು ರಾಜ್ಯ ನಿರ್ಧರಿಸಬಹುದು ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ