ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸರಕಾರಿ ಶಾಲೆಗಳಲ್ಲಿ ಪಠ್ಯ ಪುಸ್ತಕ ಕೊರತೆ ಇಲ್ಲ: ಕಾಗೇರಿ (Kageri | Yeddyurappa | Govt school | BJP | Bangalore)
Bookmark and Share Feedback Print
 
ರಾಜ್ಯದ ಸರಕಾರಿ ಶಾಲೆಗಳಲ್ಲಿ ಪಠ್ಯಪುಸ್ತಕದ ಕೊರತೆಯಿಲ್ಲ, ಸಮರ್ಪಕವಾಗಿ ವಿತರಣೆ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಇಲ್ಲಿಗೆ ಸಮೀಪದ ತಾಡತೆಗನೂರಿನ ವಿವೇಕಾನಂದ ವಿದ್ಯಾಪೀಠದ 9ನೇ ಸಂಸ್ಥಾಪಕ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಸುದ್ದಿಗಾರರ ಜತೆಗೆ ಮಾತನಾಡಿ, ಖಾಸಗಿ ಶಾಲೆಗಳಲ್ಲಿ ಮಾತ್ರ ಪಠ್ಯ ಪುಸ್ತಕಗಳ ಕೊರತೆಯಿದೆ ಎಂದರು.

ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಸಕಾಲಕ್ಕೆ ಪೂರೈಕೆ ಮಾಡುವಲ್ಲಿ ವಿಳಂಬವಾಗಿರುವುದನ್ನು ಒಪ್ಪಿಕೊಂಡ ಅವರು, ಖಾಸಗಿ ಶಾಲೆಗಳಿಗೆ ವಿಳಂಬವಾಗಲು ಆಡಳಿತ ಮಂಡಳಿಗಳೇ ಕಾರಣ ಎಂದು ಸ್ಪಷ್ಟಪಡಿಸಿದರು. ಸರಕಾರ ಪುಸ್ತಕಗಳನ್ನು ನೀಡಲು ಡಿಡಿ ಕೇಳಿದಾಗ ಆಡಳಿತ ಮಂಡಳಿಯವರು ನ್ಯಾಯಾಲಯ ಮೊರೆ ಹೋದರು. ಅಲ್ಲಿ ಅರ್ಜಿ ವಜಾಗೊಂಡ ನಂತರ ಡಿಡಿ ಕೊಟ್ಟಿದ್ದರಿಂದ ಪಠ್ಯಪುಸ್ತಕ ಮುದ್ರಿಸಿ ವಿತರಿಸಲು ತಡವಾಗಿದೆ ಎಂದು ವಿವರಣೆ ನೀಡಿದರು.

ಈ ವರ್ಷ ಆಗಿರುವ ವಿಳಂಬದಿಂದ ಪಾಠ ಕಲಿತಿದ್ದೇವೆ. ಮುಂದಿನ ವರ್ಷದಿಂದ ಹೀಗಾದಂತೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಸುಧಾರಣೆ ದೃಷ್ಟಿಯಿಂದ ಹೊಸ ಪುಸ್ತಕ ವಿತರಣಾ ಪದ್ದತಿ ಅಳವಡಿಸಿಕೊಳ್ಳಲು ಚಿಂತನೆ ನಡೆದಿದೆ ಎಂದು ಕಾಗೇರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯ ಸರಕಾರ ಭಾಷಾ ನೀತಿಗೆ ಬದ್ಧವಾಗಿರುವುದರಿಂದ ಹೊಸದಾಗಿ ಆಂಗ್ಲ ಮಾದ್ಯಮ ಶಾಲೆಗಳನ್ನು ಆರಂಭಿಸಲು ಪರವಾನಿಗೆ ನೀಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಕೆಲ ಖಾಸಗಿ ಸಂಸ್ಥೆಗಳು ಸಿಬಿಎಸ್‌ಸಿ-ಐಬಿಎಸ್‌ಸಿ ಹೆಸರಿನಲ್ಲಿ ಇಂಗ್ಲಿಷ್ ಶಾಲೆಗಳನ್ನು ಹಿಂಬಾಗಿಲಿನಿಂದ ತೆರೆಯಲು ಹವಣಿಸುತ್ತಿರುವುದರಿಂದ ಅವುಗಳನ್ನು ತಡೆಯಲು ನೋ ಕ್ಲೀಯರನ್ಸ್ ಪ್ರಮಾಣಪತ್ರ ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ