ಅಕ್ರಮ ಗಣಿಗಾರಿಕೆಯಲ್ಲಿ ಎಲ್ಲ ಪಕ್ಷಗಳ ಪಾಲೂ ಇದೆ. ಈ ಪ್ರಭಾವಿ ರಾಜಕಾರಣಿಗಳು ಏನು ಬೇಕಾದರೂ ಮಾಡಬಹುದು. ಸರಕಾರದ ಮೇಲೆ ಪ್ರಭಾವ ಬೀರಬಹುದು. ಆದರೆ ಅದಿರು ರಫ್ತು ತಡೆಯೋದು ಬಿಟ್ಟರೆ ಬೇರೆ ದಾರಿ ಇಲ್ಲ. ಈಗಾಗಲೇ ರಾಜ್ಯ ಸರಕಾರ ಕಬ್ಬಿಣದ ಅದಿರು ರಫ್ತು ನಿಷೇಧಕ್ಕೆ ಆದೇಶ ಹೊರಡಿಸಿದೆ. ಜತೆಗೆ ಹೊಸ ಗಣಿಗಾರಿಕೆ ನೀತಿ ಜಾರಿಗೆ ತರಲಾಗಿದೆ ಎಂದರು.
ಈಗ ಹೊಸದಾಗಿ ಯಾರಿಗೂ ಲೈಸನ್ಸ್ ನೀಡಿಲ್ಲ. ಈ ಹಿಂದೆ ಪಡೆಯಲಾಗಿರುವ ಲೈಸನ್ಸ್ ಅಡಿ ಗಣಿಗಾರಿಕೆ ವ್ಯವಹಾರ ನಡೆಯುತ್ತಿದೆ. ಅಕ್ರಮ ಗಣಿಗಾರಿಕೆ ಆರೋಪ ಇದ್ದರೂ ಸಮರ್ಪಕ ದಾಖಲೆ ಸಿಗುತ್ತಿಲ್ಲ.ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ ವಿರುದ್ಧವೇ ಲೋಕಾಯುಕ್ತರು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದಾರೆ ಎಂದು ವಿವರಿಸಿದರು.
ಕಾಂಗ್ರೆಸ್ ಪ್ರಭಾವ ಬೀರಿ ರಾಜ್ಯಪಾಲರ ಮೇಲೆ ಒತ್ತಡ ಹೇರಿ ಈ ಪ್ರಕರಣ ಹಿಂತೆದುಕೊಂಡಿತು. ಈಗ ನಾವು ರಾಷ್ಟ್ರಪತಿಗಳು, ಸುಪ್ರೀಂಕೋರ್ಟ್ ಮೊರೆ ಹೋಗಿ ಈ ಹಿಂದಿನ ಪ್ರಕರಣ ತನಿಖೆಗೆ ಅವಕಾಶ ನೀಡುವಂತೆ ಕೋರಲಾಗುವುದು ಎಂದರು.