ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿಯವರೇ ರಾಜ್ಯ ಬಿಟ್ಟು ತೊಲಗಿ: ಎಚ್.ಎಂ.ರೇವಣ್ಣ (Revanna | BJP | Congress | pada yathre | Yeddyurappa)
Bookmark and Share Feedback Print
 
ಬಳ್ಳಾರಿಯಲ್ಲಿ ಆ.9ರಂದು ನಡೆಯುವ ಕಾಂಗ್ರೆಸ್ ಸಮಾವೇಶ 'ಬಿಜೆಪಿಯವರೇ ರಾಜ್ಯ ಬಿಟ್ಟು ತೊಲಗಿ' ಎಂಬ ಘೋಷಣೆ ಮೊಳಗಿಸಲಿದೆ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಹೇಳಿದರು.

ಇಲ್ಲಿನ ಮಾಜಿ ಶಾಸಕ ಎಚ್.ಆರ್.ಗವಿಯಪ್ಪ ಅವರ ಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1942ರಲ್ಲಿ ಗಾಂಧಿ 'ಬ್ರಿಟಿಷರೇ ಭಾರತ ಬಿಟ್ಟು ತೊಲಗಿ' ಚಳವಳಿ ಆರಂಭಿಸಿದ್ದರು. ಆ ದಿನದ ನೆನಪಿಗಾಗಿ ಸಮಾವೇಶ ಮಾಡಲಾಗುತ್ತಿದೆ. ಸುಮಾರು 4-5 ಲಕ್ಷ ಜನ ಪಾಲ್ಗೊಳ್ಳಲಿದ್ದಾರೆ. ಬಳ್ಳಾರಿ ಪೊಲೀಸರಿಂದ ರಕ್ಷಣೆ ಸಿಗುತ್ತದೆ ಎಂಬ ವಿಶ್ವಾಸವಿಲ್ಲ. ಕಾಂಗ್ರೆಸ್ ಕಾರ್ಯಕರ್ತರಲ್ಲಿ ರಕ್ಷಣಾ ವಿಭಾಗ ಮಾಡಿಕೊಳ್ಳಲಾಗಿದೆ ಎಂದರು.

ಕಾಂಗ್ರೆಸಿಗರು ಬಳ್ಳಾರಿ ಜನರನ್ನು ಕೆಣಕುತ್ತಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಬಿಜೆಪಿಯೇ ಜನರ ಹಾದಿ ತಪ್ಪಿಸುತ್ತಿದೆ. ಲೋಕಾಯುಕ್ತ ತನಿಖೆಯಿಂದ ಅಕ್ರಮ ಅದಿರಿನ ಹಗರಣ ಪತ್ತೆ ಅಸಾಧ್ಯ. ಅದಿರನ್ನು ತಮಿಳುನಾಡು, ಆಂಧ್ರ, ಗೋವಾದಿಂದ ಚೀನಾಕ್ಕೆ ಸಾಗಿಸಲಾಗಿದೆ. ಅಲ್ಲಿಂದ ಜಪಾನ್‌‌ಗೂ ಸಾಗಿಸಲಾಗಿದೆ. ಆದ್ದರಿಂದ ಸಮಾವೇಶದ ಮೂಲಕ ಸಿಬಿಐ ತನಿಖೆಗೆ ಆಗ್ರಹಿಸಲಾಗುವುದು ಎಂದರು.

ಸಚಿವ ಶ್ರೀರಾಮುಲು ಬದಲಿಗೆ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ, ಸೋಮಶೇಖರ್ ರೆಡ್ಡಿ ತಲೆ ಬೋಳಿಸಿಕೊಳ್ಳಬೇಕಿತ್ತು. ಜನಾರ್ದನ ರೆಡ್ಡಿ ತಮ್ಮ ಪತ್ನಿ ಹೆಸರಿನಲ್ಲಿ ವಿಶ್ವ ಬಂಡವಾಳ ಹೂಡಿಕೆ ಸಮಾವೇಶದಲ್ಲಿ 36 ಕೋಟಿ ರೂ. ಹೂಡಿದ್ದಾರೆ. ಈ ಹಣ ಎಲ್ಲಿಂದ ಬಂತು? ಈ ಬಗ್ಗೆ ಸಿಬಿಐನಿಂದ ತನಿಖೆ ಆಗಬೇಕು ಎಂದರು.
ಸಂಬಂಧಿತ ಮಾಹಿತಿ ಹುಡುಕಿ