ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮುದಿ ದನಗಳನ್ನು ಸಿಎಂ ಮನೆಗೆ ತುಂಬಿ: ದೇವೇಗೌಡ ಕಿಡಿ (Deve gowda | BJP | Congress | Yeddyurappa | JDS)
Bookmark and Share Feedback Print
 
ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುದಿ ದನಗಳನ್ನು ಬೆಂಗಳೂರಿನ ಆರ್ಎಸ್ಎಸ್ ಕಚೇರಿ ಕೇಶವ ಕೃಪಾ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರ ನಿವಾಸಕ್ಕೆ ತುಂಬುವ ವಿನೂತನ ಶೈಲಿಯ ಪ್ರತಿಭಟನೆಗೆ ಸಜ್ಜಾಗಿದ್ದಾರೆ!

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಶೀಘ್ರದಲ್ಲೇ ನೂರಾರು ಲಾರಿಗಳಲ್ಲಿ ಉಪಯೋಗಕ್ಕೆ ಬಾರದ ಮತ್ತು ರೈತರಿಗೆ ಹೊರೆಯಾದ ಎಮ್ಮೆ, ಹಸುಗಳನ್ನು ತುಂಬಿಕೊಂಡು, ಕೇಶವಕೃಪಾ ಮತ್ತು ಮುಖ್ಯಮಂತ್ರಿಗಳ ಮನೆ ಬಳಿ ಬಿಡಲಾಗುವುದು. ಬೇಕಿದ್ದರೆ ಅವರೇ ಸಾಕಲಿ. ಇದರಲ್ಲಿ ಯಾವುದೇ ದಾಕ್ಷಿಣ್ಯ ಇಲ್ಲ ಎಂದು ಅವರು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಆ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುವುದನ್ನು ತಡೆ ಹಿಡಿಯಲು ಕಾನೂನಿನಡಿ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.
ಕೃಷಿ ಕ್ಷೇತ್ರವನ್ನು ನಾಶ ಮಾಡುತ್ತಲೇ ಮತ್ತೊಂದು ಕಡೆ ರೈತರನ್ನು ಮತ್ತಷ್ಟು ಪ್ರಪಾತಕ್ಕೆ ತಳ್ಳುವ ಕಾಯ್ದೆಗಳನ್ನು ಜಾರಿಗೊಳಿಸುವುದು ಕೃಷಿ ವಿರೋಧಿ ನೀತಿಯೇ ಹೊರತು ಮತ್ತೇನು ಅಲ್ಲ ಎಂದು ಟೀಕಿಸಿದರು.

ಅಷ್ಟೇ ಅಲ್ಲ, ಕೃಷಿ ಕೆಲಸಕ್ಕೆ ಬಾರದ ಜಾನುವಾರುಗಳನ್ನು ಸಾಕಲು ರೈತರಿಗೆ ಶಕ್ತಿ ಎಲ್ಲಿದೆ. ನಮ್ಮ ಕಾರ್ಯಕ್ರಮ ದಲಿತ, ಮುಸ್ಲಿಮರ ಓಲೈಕೆ ತಂತ್ರವಲ್ಲ. ಬದಲಿಗೆ ರೈತನ ಹಿತ ಕಾಪಾಡುವ ಉದ್ದೇಶವಿದೆ. ಇನ್ನೊಬ್ಬರ ಆಹಾರದ ಹಕ್ಕಿನ ಮೇಲೆ ಸವಾರಿ ಮಾಡುವ ಹಕ್ಕು ಸರಕಾರಗಳಿಗೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ