ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಯಿಂದ ಬಳ್ಳಾರಿಗೆ ದೃಷ್ಟಿ ತಗಲಬಾರದೆಂಬ ಉದ್ದೇಶದಿಂದ ಸಚಿವ ಶ್ರೀರಾಮುಲು ಕೇಶ ಮುಂಡನ ಮಾಡಿರಬಹುದು. ಆದರೆ ಇದೀಗ ಸಚಿವರಿಗೆ ದೃಷ್ಟಿಯಾಗದಿರಲು ಅಭಿಮಾನಿಗಳು ಕೂಡಾ ತಲೆ ಬೋಳಿಸಿಕೊಂಡಿರುವ ಘಟನೆ ಬಳ್ಳಾರಿಯಿಂದಲೇ ವರದಿಯಾಗಿದೆ.
ವಿಶೇಷವೆಂದರೆ ಇಬ್ಬರು ಬಿಜೆಪಿ ನಗರಸಭಾ ಸದಸ್ಯರ ಜತೆ ಐವರು ಮಹಿಳಾ ಕಾರ್ಯಕರ್ತೆಯರು ಕೇಶ ಮುಂಡನದಲ್ಲಿ ಪಾಲ್ಗೊಂಡಿದ್ದರು. ಅದೇ ವೇಳೆ ಬಾಗಲಕೋಟೆಯಿಂದಲೂ ಅಭಿಮಾನಿಗಳು ಗುಂಡು ಹೊಡಿಸಿರುವ ಪ್ರಸಂಗ ವರದಿಯಾಗಿದೆ.
ಅಭಿಮಾನಿಗಳಿಂದ ಹೋಮಹವನ... ಅದೇ ವೇಳೆ ಮಳವಳ್ಳಿಯಲ್ಲಿ ಅಭಿಮಾನಿಗಳು ಸಚಿವರಿಗಾಗಿ ಮಹಾಗಣಪತಿ ಹೋಮ, ದೃಷ್ಟಿ ಹೋಮ, ನವಗ್ರಹ ಹೋಮ ಮತ್ತು ಮೃತ್ಯುಂಜಯ ಹೋಮ ನಡೆಸಿದರು. ಗಂಗಾಧರೇಶ್ವರ ದೇಗುಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರ ಸಮಸ್ಯೆ ದೂರವಾಗಲು ಪ್ರಾರ್ಥನೆ ಸಲ್ಲಿಸಲಾಯಿತು.