ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕಾಂಗ್ರೆಸ್ ಬಳ್ಳಾರಿ ಜಾಲಿ ಇದ್ದಂತೆ: ಮಲ್ಲಿಕಾರ್ಜುನ ಖರ್ಗೆ (Mallikarjun Kharge | KPCC | Bellary | BJP)
Bookmark and Share Feedback Print
 
ರಾಜ್ಯದಲ್ಲಿ ಬಿಜೆಪಿಯನ್ನು ಮುಗಿಸುವ ತನಕ ಕಾಂಗ್ರೆಸ್ ಪಕ್ಷದ ಹೋರಾಟ ನಿಲ್ಲಿಸಬಾರದು. ಆದರೆ ಕಾಂಗ್ರೆಸ್ ಅನ್ನು ಯಾರಾದರೂ ರಾಜ್ಯದಲ್ಲಿ ನಾಶ ಮಾಡ್ತಾರೆ ಅಂದರೆ ಹಾಸ್ಯಾಸ್ಪದ ಆಗುತ್ತೆ. ಯಾಕಂದ್ರೆ, ಕಾಂಗ್ರೆಸ್- ಬಳ್ಳಾರಿ ಜಾಲಿ ಇದ್ದಂತೆ. ನೀವು ಇದನ್ನು ಎಷ್ಟೇ ಕಡಿದರೂ, ಅದು ಮತ್ತೆ ಬೆಳೆಯುತ್ತೆ. ಇದಕ್ಕೆ ಇವತ್ತಿನ ಬೃಹತ್ ಸಮಾವೇಶ ಸಾಕ್ಷಿ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ನುಡಿದರು.

ಪೊಲೀಸನ ಮಗ ಕಳ್ಳ: ಹರಿಪ್ರಸಾದ್
ಬಿಜೆಪಿ ಮಂದಿ ನಕಲಿ ದೇಶಭಕ್ತರು. ಇವರಿಗೆ ಯಾವ ರೀತಿಯಿಂದಲೂ ಸದೃಢ ಮತ್ತು ಕಾಂಗ್ರೆಸ್ ಅನ್ನು ಎದುರಿಸಲು ಸಾಧ್ಯವಿಲ್ಲ. ಅಲ್ಲದೆ, ಪೊಲೀಸನ ಮಗನಾದ ಜನಾರ್ದನ ರೆಡ್ಡಿ- ಅದಿರು ಕಳ್ಳರನ್ನು ಹಿಡಿಯಬೇಕಿತ್ತು. ಆದರೆ, ಅವರೇ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಇವರಿಗೆ ತಕ್ಕ ಶಾಸ್ತಿ ಆಗಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದರು.

ಸೊನ್ನೆಗೆ ಸಮಾವೇಶವೇ?: ಧರ್ಮಸಿಂಗ್
ಬಿಜೆಪಿ ಅಧಿಕಾರಕ್ಕೆ ಬಂದು ಎರಡು ವರ್ಷ ಮುಗಿದಿದೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಇವರ ಸಾಧನೆ ಸೊನ್ನೆ. ಈ ಸೊನ್ನೆ ಸಾಧನೆಗೆ ಊರು ತುಂಬಾ ಬಿಜೆಪಿ ಮಂದಿ ಕೋಟ್ಯಂತರ ರೂ. ಖರ್ಚು ಮಾಡಿ, ಸಮಾವೇಶ ನಡೆಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಟೀಕಿಸಿದರು.

ರಾಷ್ಟ್ರದ ಕಣ್ಣು ತೆರೆಸಿದೆ: ಮುನಿಯಪ್ಪ
ಅಕ್ರಮ ಗಣಿಗಾರಿಕೆ ವಿರುದ್ಧ ಕೆಪಿಸಿಸಿ ಹಮ್ಮಿಕೊಂಡ ಪಾದಯಾತ್ರೆ ರಾಷ್ಟ್ರದ ಕಣ್ಣು ತೆರೆಸಿದೆ. ಅಕ್ರಮ ಗಣಿಗಾರಿಕೆಯ ಆಳ- ಅಗಲವನ್ನು ಇಡೀ ದೇಶಕ್ಕೆ ಪರಿಚಯ ಮಾಡಿಕೊಟ್ಟಿದೆ. ಇದು ಗಣಿಗಾರಿಕೆಯನ್ನು ರಾಷ್ಟ್ರೀಕರಣ ಮಾಡುವ ದಿಸೆಯಲ್ಲೂ ಒತ್ತಾಸೆಯಾಗಿ ನಿಲ್ಲಲಿದೆ ಎಂದು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ಈಸ್ಟ್ ಇಂಡಿಯಾ ಕಂಪನಿ: ಮೋಟಮ್ಮ
ಗಣಿ ಮಾಫಿಯಾ ಎನ್ನುವುದು ಈಸ್ ಇಂಡಿಯಾ ಕಂಪನಿ ಇದ್ದಂಗೆ. ರೆಡ್ಡಿಗಳು ಈ ಕಂಪನಿಯನ್ನು ಬಳ್ಳಾರಿಯಲ್ಲಿ ನಡೆಸಿ, ಇಲ್ಲಿಯ ಮಂದಿಯನ್ನು ತಲೆ ಎತ್ತದಂತೆ, ದನಿ ಇಲ್ಲದಂತೆ ಮಾಡಿ ಶೋಷಣೆ ಮಾಡುತ್ತಿದ್ದಾರೆ. ಪಾದಯಾತ್ರೆಯನ್ನು ನಾವೇ ಮಾಡಬೇಕು ಅಂತ ಬಿಜೆಪಿ ಮಂದಿ ಏನಾದ್ರೂ ಏಜೆನ್ಸಿ ಪಡೆದುಕೊಂಡಿದ್ದಾರಾ? ಎಂದು ಪ್ರತಿಪಕ್ಷ ನಾಯಕಿ ಮೋಟಮ್ಮ ಪ್ರಶ್ನಿಸಿದರು.

ಮಾನ ಇಲ್ಲದ ಮೇಲೆ... ಇರಬಾರದು!
ಯಡಿಯೂರಪ್ಪ... ಮಾನ ಇಲ್ಲದ ಮೇಲೆ ಮುಖ್ಯಮಂತ್ರಿ ಗದ್ದುಗೆಯಲ್ಲಿ ಇರಬಾರದು ಎಂದು ಸಿ.ಎಂ.ಇಬ್ರಾಹಿಂ ಲೇವಡಿ ಮಾಡಿದರು. ನಾವು 320 ಕಿ.ಮೀ ಪಾದಯಾತ್ರೆ ಮಾಡಿದ್ದೇವೆ. ಆದರೆ, ಯಡಿಯೂರಪ್ಪ ವಿಧಾನಸೌಧದಿಂದ ತಮ್ಮ ಮನೆ ಪಾದಯಾತ್ರೆ ಮಾಡಿ ತೋರಿಸಲಿ ಎಂದು ಸವಾಲು ಹಾಕಿದ ಅವರು, 'ಸುಷ್ಮಾ ತಾಯಿ... ಎಂಥ ದುಷ್ಟ ಮಕ್ಕಳನ್ನು (ರೆಡ್ಡಿ ಸೋದರರು) ಹೆತ್ತಿದ್ದೀಯಾ?' ಎಂದು ಟೀಕಿಸಿದರು.
ಸಂಬಂಧಿತ ಮಾಹಿತಿ ಹುಡುಕಿ