ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸವಣೂರು ಘಟನೆ ಹಿಂದೆ ರಾಜಕೀಯ ಪಿತೂರಿ: ಸುಧಾಕರ (Havery | BJP | Yeddyurappa | Congress | Police)
Bookmark and Share Feedback Print
 
ಸವಣೂರಲ್ಲಿ ಭಂಗಿ ಸಮುದಾಯದವರು ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿದ ಘಟನೆ ಹಿಂದೆ ರಾಜಕೀಯ ಪಿತೂರಿಯಿದೆ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಡಿ.ಸುಧಾಕರ ಆರೋಪಿಸಿದ್ದಾರೆ.

ಭಂಗಿ ಕುಟುಂಬಗಳನ್ನು ಮಂಗಳವಾರ ಭೇಟಿ ಮಾಡಿ ಪರಿಸ್ಥಿತಿ ಅವಲೋಕಿಸಿದ ನಂತರ ಸವಣೂರಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸ್ಥಳೀಯ ರಾಜಕೀಯ ವ್ಯಕ್ತಿಗಳು ಅವರನ್ನು ಈ ರೀತಿಯ ಘಟನೆಗೆ ಪ್ರೋತ್ಸಾಹಿಸಿದ್ದಾರೆ. ಹೀಗೆ ಪ್ರಚೋದಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದರೆ, ಅಂಥವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.

ಈ ಬಗ್ಗೆ ತನಿಖೆ ನಡೆಸುತ್ತಿರುವ ಜಿಲ್ಲಾಧಿಕಾರಿಗಳು ಸಲ್ಲಿಸುವ ವರದಿ ಹಾಗೂ ವಾಸ್ತವಾಂಶ ಆಧರಿಸಿ ಮತ್ತೊಮ್ಮೆ ಬೇರೆ ರೀತಿಯಲ್ಲಿ ತನಿಖೆ ನಡೆಸಲಾಗುವುದು. ಸದ್ಯ ಜಿಲ್ಲಾಧಿಕಾರಿಗಳು ನಡೆಸುತ್ತಿರುವ ತನಿಖೆ ಪಾರದರ್ಶಕವಾಗಿರುವುದಿಲ್ಲ ಎಂಬ ದೂರು ಗಮನಕ್ಕೆ ಬಂದಿದೆ. ಹೀಗಾಗಿ, ಅವರ ವರದಿಯೇ ಅಂತಿಮವಲ್ಲ ಎಂದು ಹೇಳಿದರು.

ಈ ಘಟನೆ ನಂತರ ಭಂಗಿ ಸಮುದಾಯದವರಿಗೆ ಸರಕಾರ ಎಲ್ಲ ನೆರವು ನೀಡಿ ಸೂಕ್ತ ಕ್ರಮ ಕೈಗೊಂಡಿದೆ. ಉದ್ಯೋಗ, ಪ್ರತ್ಯೇಕ ಮನೆ, ತಲಾ ಒಬ್ಬರಿಗೆ 50 ಸಾವಿರ ರೂ. ಸಾಲ ಸೌಲಭ್ಯ ನೀಡಲಾಗಿದೆ. ಸ್ಮಶಾನಕ್ಕೆ 10 ಗುಂಟೆ ಜಮೀನು ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿರುವ ಭಂಗಿ ಸಮಾಜದ ಜನರ ಬಗ್ಗೆ ಇಲಾಖೆಯಿಂದ ಕಳೆದ ಎರಡು ತಿಂಗಳಿಂದ ಸಮೀಕ್ಷೆ ನಡೆಸಲಾಗುತ್ತಿದೆ. ಅವರಿಗೆಲ್ಲ ಒಂದು ತಿಂಗಳಲ್ಲಿ ಪುನರ್ವಸತಿ ಕಲ್ಪಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಭಂಗಿ ಸಮುದಾಯದವರಿಗೆ ಸವಣೂರಲ್ಲಿ ನಿರ್ಮಿಸಲಾಗುತ್ತಿರುವ ಮನೆಗಳು ಕಳಪೆಯಾಗಿಲ್ಲ. ನಿಗದಿತ ಸಮಯದಲ್ಲಿ ಮನೆ ನಿರ್ಮಿಸಿ ಹಸ್ತಾಂತರಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ