ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 'ಕಾಮಿಸ್ವಾಮಿ' ಪುಸ್ತಕ ಮಾರಾಟಕ್ಕೆ ಕೋರ್ಟ್ ನಿಷೇಧ (Court | Nithyananda | Ranjitha | Bangalore | Rama nagar)
Bookmark and Share Feedback Print
 
'ಕಾಮಿ ಸ್ವಾಮಿ, ನಿತ್ಯೋತ್ಸವ ನಿತ್ಯಾನಂದ' ಎಂಬ ಪುಸ್ತಕ ಮುದ್ರಣ ಮತ್ತು ಮಾರಾಟಕ್ಕೆ ನಿಷೇಧ ಹೇರಿ ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯ ಬುಧವಾರ ಆದೇಶ ನೀಡಿದೆ.

ಕಾಮಿ ಸ್ವಾಮಿ, ನಿತ್ಯೋತ್ಸವ ನಿತ್ಯಾನಂದ ಪುಸ್ತಕದಲ್ಲಿ ನಿತ್ಯಾನಂದರ ಭಾವಚಿತ್ರ ಬಳಕೆ ಮಾಡಿರುವ ಹಿನ್ನೆಲೆಯಲ್ಲಿ ಪುಸ್ತಕ ಮುದ್ರಣ ಮತ್ತು ಮಾರಾಟಕ್ಕೆ ನಿರ್ಬಂಧ ಹೇರಬೇಕೆಂದು ಕೋರಿ ನಿತ್ಯಾನಂದ ಧ್ಯಾನಪೀಠ ಅರ್ಜಿ ಸಲ್ಲಿಸಿತ್ತು.

ಇಂದು ಧ್ಯಾನಪೀಠದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ನಿತ್ಯಾನಂದ ಸ್ವಾಮಿ ಭಾವಚಿತ್ರ ಬಳಸಿಕೊಂಡಿರುವ ಹಿನ್ನೆಲೆಯಲ್ಲಿ ಪುಸ್ತಕ ಮಾರಾಟ ಮತ್ತು ಮುದ್ರಣಕ್ಕೆ ನಿರ್ಬಂಧ ವಿಧಿಸಿರುವುದಾಗಿ ತಿಳಿಸಿದೆ.

ಇತ್ತೀಚೆಗಷ್ಟೇ ನಗರದ ಪ್ರೆಸ್‌ಕ್ಲಬ್‌ನಲ್ಲಿ ಡಿ.ಎಂ.ಹೆಗಡೆ ಅವರ ಕಾಮಿ ಸ್ವಾಮಿ, ನಿತ್ಯೋತ್ಸವ ನಿತ್ಯಾನಂದರು ಎಂಬ ಪುಸ್ತಕವನ್ನು ಸಂಸದ ಎಚ್.ವಿಶ್ವನಾಥ್ ಬಿಡುಗಡೆಗೊಳಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ