ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ದೇಶದ ಪ್ರಗತಿಗೆ ಸಾಕ್ಷರತೆ ಮುಖ್ಯ: ಸುರೇಶ್ ಕುಮಾರ್ (Mysore | Suresh kumar | BJP | Loka shiskshana | Karnataka)
Bookmark and Share Feedback Print
 
ಯಾವುದೇ ರಾಷ್ಟ್ರ ಪ್ರಗತಿ ಕಾಣಲು ಶಿಕ್ಷಣ ಮತ್ತು ಆರೋಗ್ಯ ಬಹುಮುಖ್ಯ. ಆದರೆ ಸಾಕ್ಷರತೆಗೆ ಹೆಚ್ಚು ಒತ್ತು ನೀಡದ ಕಾರಣ ಇವತ್ತಿಗೂ ಅನಕ್ಷರಸ್ಥರು ಉಳಿದುಕೊಂಡಿದ್ದಾರೆ ಎಂದು ನಗರಾಭಿವೃದ್ದಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಎಸ್.ಸುರೇಶ್ ಕುಮಾರ್ ವಿಷಾದಿಸಿದರು.

ಪುರಭವನದಲ್ಲಿ ಬುಧವಾರ ಕರ್ನಾಟಕ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರದ ಜಿಲ್ಲಾ ಲೋಕ ಶಿಕ್ಷಣ ಸಮಿತಿ ಹಮ್ಮಿಕೊಂಡಿದ್ದ 'ಸಾಕ್ಷರ ಭಾರತ-2012' ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿಜವಾದ ಅರ್ಥದಲ್ಲಿ ಭಾರತ ಮುಂದುವರಿದ ರಾಷ್ಟ್ರವಾಗಬೇಕಾದರೆ ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ನೀಡಬೇಕಿದೆ ಎಂದರು.

ಭಾರತ ಕುರಿತಂತೆ ಅನೇಕ ದೂರುಗಳಿವೆ. ಭಾರತ ಅನಕ್ಷರಸ್ಥರ ದೇಶ ಎನ್ನುವುದು ಅವುಗಳಲ್ಲಿ ಒಂದು. ಹಾಗಾಗಿ ಆ ದೂರನ್ನು ದೂರ ಮಾಡಲು ಪ್ರತಿ ನಾಗರಿಕನೂ ಅಕ್ಷರಸ್ಥನಾಗಬೇಕು. ಸಾಕ್ಷರತೆ ಎಂದರೆ ಕೇವಲ ರುಜು ಹಾಕುವುದಲ್ಲ, ಓದು, ಬರಹ, ಲೆಕ್ಕಾಚಾರದ ಬಗ್ಗೆ ತಿಳಿವಳಿಕೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಒಂದೆಡೆ ಅನೇಕ ಪದವಿಗಳನ್ನು ಪಡೆದವರು ಇದ್ದರೆ, ಮತ್ತೊಂದೆಡೆ ಶಾಲೆ ಮೆಟ್ಟಿಲು ಏರದವರು ಇರುವುದು ವಿಪರ್ಯಾಸ. ಮಹಿಳೆಯರು ಸಾಕ್ಷರರಾದರೆ ಆ ಕುಟುಂಬ ವರ್ಗವೇ ಸಾಕ್ಷರರಾಗುತ್ತಾರೆ. ಈ ಹಿನ್ನೆಲೆಯಲ್ಲಿ ಶೇ.50ಕ್ಕಿಂತ ಕಡಿಮೆ ಮಹಿಳಾ ಸಾಕ್ಷರತೆ ಇರುವ ರಾಜ್ಯದ 18 ಜಿಲ್ಲೆಗಳಲ್ಲಿ ಸಾಕ್ಷರ ಭಾರತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಯಶಸ್ವಿಗೆ ಅಕ್ಷರಸ್ಥರು ಮುಂದಾಗಬೇಕಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ