ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪ್ರಿಯಾಂಕಾಳನ್ನು ಕೊಂದಿದ್ದು ನಾನೇ: ಪತಿ ಗುಪ್ತಾ ತಪ್ಪೊಪ್ಪಿಗೆ (Infosys | Sathish Gupta | Priyanka | DPS teacher | murder)
Bookmark and Share Feedback Print
 
ನಗರದ ವೆಂಕಟೇಶ್ವರ ಲೇಔಟ್‌ನಲ್ಲಿ ನಡೆದಿದ್ದ ಪ್ರಿಯಾಂಕಾ ಗುಪ್ತಾ (29) ಅವರ ಹತ್ಯೆಯ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಆರೋಪಿ ಪತಿ ಇನ್ಫೋಸಿಸ್ ಉದ್ಯೋಗಿ ಸತೀಶ್ ಗುಪ್ತಾನನ್ನು (32) ಬಂಧಿಸಿರುವುದಾಗಿ ಹುಳಿ ಮಾವು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕೋಣನಕುಂಟೆಯ ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಕ್ಷಕಿಯಾಗಿ ಪ್ರಿಯಾಂಕಾ ಕಾರ್ಯನಿರ್ವಹಿಸುತ್ತಿದ್ದರು. ಆಕೆಯನ್ನು ಆಗೋಸ್ಟ್ 10ರಂದು ವೆಂಕಟೇಶ್ವರ ಲೇಔಟ್‌ನ ನಿವಾಸದಲ್ಲಿ ಹತ್ಯೆಗೈಯಲಾಗಿತ್ತು. ಪತಿ ಸತೀಶ್ ಇನ್ಫೋಸಿಸ್‌ನ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕವಾಗಿ ಕೆಲಸ ಮಾಡುತ್ತಿದ್ದ.

ಕೊಲೆಗೆ ಕಾರಣ ಅನೈತಿಕ ಸಂಬಂಧ: ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಸತೀಶ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಅಷ್ಟೇ ಅಲ್ಲ ಗಂಡನ ಪುರುಷತ್ವದ ಕುರಿತು ಪ್ರಿಯಾಂಕಾ ಚುಚ್ಚು ಮಾತನಾಡುತ್ತಿದ್ದಳು. ಅಲ್ಲದೆ, ಗುಪ್ತಾ ಪೋಷಕರು ಮನೆಗೆ ಬಾರದಂತೆ, ಸಂಬಳ ನೀಡದಂತೆ ಪ್ರಿಯಾಂಕಾ ಗಂಡನ ಮೇಲೆ ಒತ್ತಡ ಹೇರಿದ್ದಳು. ಈ ಕಾರಣದಿಂದಾಗಿ ಇಬ್ಬರ ನಡುವೆ ವಿರಸ ಹೆಚ್ಚಾಗಿತ್ತು.

ಇದರ ಪರಿಣಾಮವಾಗಿಯೇ ತಾನು ಹೆಂಡತಿಯನ್ನು ಹತ್ಯೆಗೈದಿರುವುದಾಗಿ ಪತಿ ಸತೀಶ್ ಗುಪ್ತಾ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಆದರೆ ಹೆಂಡತಿಯ ಕೊಲೆ ನಡೆದಾಗ ಆರೋಪಿ ಇಲಾಖೆಯ ದಿಕ್ಕು ತಪ್ಪಿಸಿದ್ದ. ಇದೊಂದು ವ್ಯವಸ್ಥಿತ ಕೊಲೆ ಎಂದು ಹೇಳಿದ್ದ. ಕೊನೆಗೆ ಪೊಲೀಸರು ಸತೀಶನ ಮೊಬೈಲ್ ಕರೆ ಪರಿಶೀಲಿಸಿದಾಗ ಕೊಲೆ ರಹಸ್ಯ ಬಯಲಾಗಿತ್ತು.

ಪತ್ನಿ ಪ್ರಿಯಾಂಕಾಳ ಕುತ್ತಿಗೆಗೆ ಹಗ್ಗ ಬಿಗಿದು ಸತೀಶ್ ಹತ್ಯೆ ಮಾಡಿದ್ದ. ಈ ಸಂದರ್ಭದಲ್ಲಿ ಆಕೆಯನ್ನು ಕುರ್ಚಿಗೆ ಕಟ್ಟಿ ಹಾಕಿ ಚಾಕುವಿನಿಂದ ಕತ್ತು ಸೀಳಿದ್ದ. ಮನೆಯಲ್ಲಿದ್ದ ಆಭರಣ ಕಳವು ಮಾಡಿ, ಹೆಂಡತಿಯನ್ನು ಹತ್ಯೆಗೈದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದ. ಆದರೆ ತನಿಖೆ ನಡೆಸಿದ ಪೊಲೀಸರಿಗೆ ಮನೆಯನ್ನು ಪರಿಶೀಲಿಸಿದಾಗ ಆಭರಣ ಮನೆಯಲ್ಲೇ ಇರುವುದು ಪತ್ತೆಯಾಗಿತ್ತು. ಸಂಶಯಗೊಂಡ ಪೊಲೀಸರು ತನಿಖೆ ತೀವ್ರಗೊಳಿಸಿದಾಗ ಹಂತಕ ಪತಿ ಸಿಕ್ಕಿಬಿದ್ದಿದ್ದ.

ಆರೋಪಿಯನ್ನು ಶುಕ್ರವಾರ ರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಗುಪ್ತಾನನ್ನು ಎಂಟು ದಿನಗಳ ಕಾಲ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ