ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿದ್ದು ತವರಲ್ಲಿ ಶಕ್ತಿ ಪ್ರದರ್ಶನ: ಸಿಎಂಗೆ ಆಡ್ವಾಣಿ ಶಬ್ಬಾಸ್‌ಗಿರಿ (Siddaramaiah | Advani | Congress | BJP | Yeddyurppa | Mysore)
Bookmark and Share Feedback Print
 
PTI
ರಾಜ್ಯದಲ್ಲಿ ಯಾವುದೇ ರೀತಿಯ ಅಕ್ರಮ ಗಣಿಗಾರಿಕೆಗೆ ಅವಕಾಶ ಮಾಡಿ ಕೊಡುವುದಿಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಅಲ್ಲದೆ,ಸ್ವತಃ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ನಿಯೋಗದ ಮೂಲಕ ಭೇಟಿಯಾಗಿ ದೇಶದಲ್ಲಿ ಕಾನೂನು ಬಾಹಿರ ಗಣಿಗಾರಿಕೆ ನಿಲ್ಲಬೇಕು. ವಿದೇಶಕ್ಕೆ ರಫ್ತು ಆಗಬಾರದು ಎಂಬ ವಿಷಯ ಪ್ರತಿಪಾದನೆ ಮಾಡಿರುವುದು ಹೆಮ್ಮೆಯ ವಿಚಾರ ಎಂದು ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ಶಬ್ಬಾಸ್‌ಗಿರಿ ನೀಡಿದರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಸಾಂಸ್ಕೃತಿಕ ನಗರಿಯ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ಬಿಜೆಪಿ ಬೃಹತ್ ಜನಜಾಗೃತಿ ಸಭೆಯನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. 2008ರಲ್ಲಿ ಕರ್ನಾಟಕಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಉತ್ತಮ ಆಡಳಿತ ಬಂದಿದೆ. ಆ ಕಾರಣಕ್ಕಾಗಿಯೇ ರಾಜ್ಯದ ಜನರು ಭಾರತೀಯ ಜನತಾ ಪಕ್ಷಕ್ಕೆ ಆಶೀರ್ವಾದ ಮಾಡುತ್ತಿದ್ದಾರೆ ಎಂದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 63 ವರ್ಷವಾದರೂ ಕೂಡ ದೆಹಲಿಯಲ್ಲಿ ಬಂದ ಶಾಸಕರು, ಸಂಸದರು ಸರಿಯಾದ ರೀತಿಯಲ್ಲಿ ಅಧಿಕಾರದ ಉಪಯೋಗ ಮಾಡಿಲ್ಲ. ರಾಷ್ಟ್ರಕ್ಕೆ ಸ್ವರಾಜ್ಯ ಬಂದರೂ ಕೂಡ ಸುರಾಜ್ಯ ಬರಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಆದರೆ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿಯೂ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ಸುರಾಜ್ಯ ನಿರ್ಮಾಣವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಈಶ್ವರಪ್ಪ, ಸಂಸದರು, ಶಾಸಕರು ಸರಿಯಾದ ರೀತಿಯಲ್ಲಿ ರಾಜ್ಯದ ಜನರ ಸೇವೆಯನ್ನು ಸರಿಯಾಗಿ ಮಾಡದಿದ್ದರೆ ಈ ಸಾಂಸ್ಕೃತಿಕ ನಗರಿಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಜನ ಸೇರುತ್ತಿರಲಿಲ್ಲ. ಆದರೆ ಬಿಜೆಪಿ ಪ್ರಭಾವದ ಬಗ್ಗೆ ಜನಸಾಗರವೇ ಒಂದು ಲಕ್ಷಣ ಅಂತ ಭಾವಿಸಬೇಕಾಗಿಲ್ಲ. ಯಾಕೆಂದರೆ ಲೋಕಸಭೆ, ರಾಜ್ಯದಲ್ಲಿ ನಡೆದ ಉಪ ಚುನಾವಣೆ, ವಿಧಾನಪರಿಷತ್, ಬಿಬಿಎಂಪಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಜನರು ಆಶೀರ್ವಾದ ಮಾಡಿದ್ದಾರೆ. ಇದು ರಾಜ್ಯದ ಜನರು ಬಿಜೆಪಿ ಮೇಲೆ ಇಟ್ಟಿರುವ ಭರವಸೆಯಾಗಿದೆ ಎಂದು ನಾನು ಭಾವಿಸುತ್ತೇನೆ ಎಂದರು.

ವಾಜಪೇಯಿ ಆಡಳಿತ ಭ್ರಷ್ಟಾಚಾರ ರಹಿತವಾದದ್ದು: ದೇಶದ 63 ವರ್ಷಗಳ ಆಡಳಿತಾವಧಿಯಲ್ಲಿ ವಾಜಪೇಯಿ ನೇತೃತ್ವದ ಆರು ವರ್ಷಗಳ ಕಾಲದ ಆಡಳಿತವನ್ನು ಈ ದೇಶದ ಜನತೆ ಯಾವತ್ತೂ ಮರೆಯವುದಿಲ್ಲ. ಆ ಸಂದರ್ಭದಲ್ಲಿಯೇ ದೇಶವನ್ನು ಸ್ವರಾಜ್ಯದತ್ತ ಕೊಂಡೊಯ್ಯಲು ಸಾಧ್ಯವಾಯಿತು ಎಂದು ಆಡ್ವಾಣಿ ಶ್ಲಾಘಿಸಿದರು.

ವಾಜಪೇಯಿ ಪ್ರಧಾನಿಯಾಗಿದ್ದ ಕಾಲದಲ್ಲಿ ದಿನನಿತ್ಯದ ವಸ್ತುಗಳ ಬೆಲೆ ಏರಿಲ್ಲ. ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಆಯಿತು ಎಂಬುದನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳಬೇಕು. ಅಷ್ಟೇ ಅಲ್ಲ ಆರು ವರ್ಷಗಳ ಕಾಲ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಕೀರ್ತಿ ಎನ್‌ಡಿಎ ಸರಕಾರದ್ದು ಎಂದರು.

ಪ್ರಧಾನಿ ಕುರ್ಚಿ ಮೌಲ್ಯ ಕುಂದುತ್ತಿದೆ: ದೇಶದ ಪ್ರಧಾನಿ ಹುದ್ದೆ ತುಂಬಾ ಪವಿತ್ರವಾದದ್ದು. ವಾಜಪೇಯಿ ಕಾಲದಲ್ಲಿ ಆ ಹುದ್ದೆಗೆ ಗೌರವ ಬಂದಿತ್ತು. ಆದರೆ ಈಗ ಕಳೆದ ಆರು ವರ್ಷಗಳಿಂದ ಗೌರವ ಕಳೆದುಕೊಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ. ದಿನೇ, ದಿನೇ ಪ್ರಧಾನಿ ಕುರ್ಚಿಯ ಮೌಲ್ಯ ಕಳೆದುಕೊಳ್ಳುತ್ತಿದೆ ಎಂಬುದು ಸತ್ಯ ಎಂದು ಆಡ್ವಾಣಿ ಹೇಳಿದರು.

ಕನ್ನಡದಲ್ಲಿ ಮಾತನಾಡುತ್ತಿಲ್ಲ ಕ್ಷಮಿಸಿ: ಈ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ನಿಮ್ಮನ್ನು ಉದ್ದೇಶಿಸಿ ಕನ್ನಡದಲ್ಲಿ ಮಾತನಾಡಲು ಆಗದಿರುವುದಕ್ಕೆ ನಾನು ಕ್ಷಮೆಯಾಚಿಸುತ್ತೇನೆ. ಆ ನಿಟ್ಟಿನಲ್ಲಿ ನಾನು ಹಿಂದಿ-ಇಂಗ್ಲಿಷ್ ಭಾಷೆ ಉಪಯೋಗಿಸಿ ಭಾಷಣ ಮಾಡುತ್ತೇನೆ ಎಂದು ಎಲ್.ಕೆ.ಆಡ್ವಾಣಿ ಹೇಳಿದರು.

ಆದರೆ ನನ್ನ ಭಾಷಣವನ್ನು ಎಂಎಲ್‌ಸಿ ಮಧುಸೂದನ್ ಅವರು ತುಂಬಾ ಉತ್ತಮವಾಗಿ ಭಾಷಾಂತಾರ ಮಾಡುತ್ತಾರೆ ಎಂದು ಶ್ಲಾಘಿಸಿದರು. ಆದರೂ ನನಗೆ ಕನ್ನಡ ಭಾಷೆ ಬಗ್ಗೆ ನನಗೆ ಸ್ವಲ್ಪ ಪರಿಚಯವಿದೆ. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಸಂದರ್ಭದಲ್ಲಿ ನಾನು ಬೆಂಗಳೂರು ಜೈಲಿನಲ್ಲಿ ಸುಮಾರು 19 ತಿಂಗಳ ಕಾಲ ಕಳೆದಾಗ ಕನ್ನಡ ಸಹಿ ಹಾಕಲು, ಪೇಪರ್ ಹೆಡ್ಡಿಂಗ್ ಓದಲು ಕಲಿತಿದ್ದೇನೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ