ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 'ಕೈ' ಪಾಳಯದಲ್ಲಿ ಇರೋದು ನಕಲಿ ಕಾಂಗ್ರೆಸ್ಸಿಗರು: ಅನಂತ್ ಕುಮಾರ್ (Congress | Anatha kumar | Advani | Mysore | Yeddyurappa)
Bookmark and Share Feedback Print
 
ರಾಜ್ಯದ ಕಾಂಗ್ರೆಸ್‌ನಲ್ಲಿ ಇರುವುದು ಬರೇ ನಕಲಿ ಮತ್ತು 2ನೇ ದರ್ಜೆ ನಾಯಕರು. ಹಾಗಾಗಿ ರಾಜ್ಯದ ಕಾಂಗ್ರೆಸ್ ಸ್ಥಿತಿ ನೋಡಿ ಮರುಕವಾಗುತ್ತಿದೆ ಎಂದು ಸಂಸದ, ಬಿಜೆಪಿ ಮುಖಂಡ ಅನಂತ್ ಕುಮಾರ್ ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಶನಿವಾರ ಮೈಸೂರಿನಲ್ಲಿ ಬೃಹತ್ ಜನಜಾಗೃತಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಯಾವ ಪಕ್ಷದಲ್ಲಿದ್ರು, ಆರ್.ವಿ.ದೇಶಪಾಂಡೆ, ಬಿ.ಎಲ್.ಶಂಕರ್, ಸಿಎಂ ಇಬ್ರಾಹಿಂ, ಎಂ.ಪಿ.ಪ್ರಕಾಶ್ ಸೇರಿದಂತೆ ಈ ಮುಖಂಡರ ಮೂಲ ಜನತಾ ಪಕ್ಷ ಮತ್ತು ಜನತಾದಳವಾಗಿದೆ. ಹಾಗಾಗಿ ಇವರೆಲ್ಲ ನಕಲಿ ಕಾಂಗ್ರೆಸ್ ಮುಖಂಡರು. ರಾಜ್ಯದ ಕಾಂಗ್ರೆಸ್‌ನಲ್ಲಿ ಈಗ ಒರಿಜಿನಲ್ ಕಾಂಗ್ರೆಸ್ ಮುಖಂಡರೇ ಇಲ್ಲ ಎಂದು ಟೀಕಿಸಿದರು.

ಈ ಹಿಂದೆ ಸಿದ್ದರಾಮಯ್ಯ, ಸಿಎಂ ಇಬ್ರಾಹಿಂ ಇಂದಿರಾಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷವನ್ನು ಬಾಯಿಗೆ ಬಂದಂತೆ ಟೀಕಿಸಿದ್ದರು. ಈಗ ಅದೇ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಕಾಂಗ್ರೆಸ್ ಪಕ್ಷವನ್ನು ಹೊಗಳಿ, ಬಿಜೆಪಿಯನ್ನು ತೆಗಳುತ್ತಿದ್ದಾರೆ ಎಂದರು. ವಲಸೆ ಬಂದ ಮುಖಂಡರಿಂದ ಕಾಂಗ್ರೆಸ್ ಪಕ್ಷ ತುಂಬಿ ಹೋಗಿದೆ. ಆ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ನಿಜವಾದ ಕಾಂಗ್ರೆಸ್ ಮುಖಂಡರ ಲೀಡರ್‌ಷಿಪ್ ಖತಂ ಆಗಿದೆ ಎಂದರು.

ಇಂತಹ ನಾಯರಿಂದ ಕಾಂಗ್ರೆಸ್ ಪಕ್ಷ ಉದ್ದಾರವಾಗಲು ಸಾಧ್ಯವಿಲ್ಲ. ಅಲ್ಲದೆ, ರಾಜ್ಯದ ಅಭಿವೃದ್ದಿಯೂ ಕಾಂಗ್ರೆಸ್ ಪಕ್ಷದಿಂದ ಅಸಾಧ್ಯ ಎಂಬುದು ಹಲವಾರು ದಶಕಗಳ ಆಡಳಿತದಲ್ಲಿ ಸಾಬೀತಾಗಿದೆ. ಆದರೆ ಬಿಜೆಪಿಯ ಜನಪರ ಆಡಳಿತ ಮೆಚ್ಚಿ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಇವರ ಸಂಗ್ಯಾ-ಬಾಳ್ಯಾ ನಾಟಕ ಹೆಚ್ಚು ದಿನ ನಡೆಯೋದಿಲ್ಲ ಎಂದು ಲೇವಡಿ ಮಾಡಿದ ಅನಂತ್ ಕುಮಾರ್, ಆರ್.ವಿ.ದೇಶಪಾಂಡೆ ಸಂಗ್ಯಾ, ಡಿಕೆಶಿ ಬಾಳ್ಯಾ, ಸಿದ್ದರಾಮಯ್ಯ ಜೋಕುರಸ್ವಾಮಿ ಎಂದು ಮೂದಲಿಸಿದರು.

ಇನ್ನು ಕೆಲವೇ ದಿನಗಳಲ್ಲಿ ಗುಲ್ಬರ್ಗಾ ಮತ್ತು ಕಡೂರಿನಲ್ಲಿ ವಿಧಾನಸಭೆಗೆ ಉಪ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ತಾಕತ್ತಿದ್ದರೆ ಏಕಾಂಗಿಯಾಗಿ ಸ್ಪರ್ಧಿಸಿ ಎಂದು ಸವಾಲು ಹಾಕಿದರು. ದೇವೇಗೌಡರು ಮತ್ತು ರೇವಣ್ಣ ಏಕಾಂಗಿಯಾಗಿ ಸ್ಪರ್ಧಿಸಲು ಮುಂದಾಗುತ್ತೀರಾ ಎಂದು ಪ್ರಶ್ನಿಸಿದರು. ಯಾಕೆಂದರೆ ಯಾವಾಗಲೂ ನಿಮ್ಮದು ಒಳ ಒಪ್ಪಂದ, ಹಾಗಾಗಿ ನೀವು ಏಕಾಂಗಿಯಾಗಿ ಹೋರಾಟ ಮಾಡಲ್ಲ. ಆದರೆ ಭಾರತೀಯ ಜನತಾ ಪಕ್ಷ ಜನರೊಂದಿಗೆ ನೇರ ಒಪ್ಪಂದ ಮಾಡಿಕೊಂಡಿದೆ. ಆ ನೆಲೆಯಲ್ಲಿ ನಾವು ಏಕಾಂಗಿಯಾಗಿಯೇ ಸ್ಪರ್ಧಿಸುತ್ತೇವೆ ಎಂದು ಹೇಳಿದರು.

ನಿಮ್ಮ ಒಳಒಪ್ಪಂದದ ನಾಟಕ ಇನ್ಮುಂದೆ ನಡೆಯೋದಿಲ್ಲ, ನಿಮ್ಮ ನಾಟಕ ಜನರು ನೋಡುತ್ತಿದ್ದಾರೆ. ಮುಂದಿನ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಗೆಲುವು ಸಾಧಿಸಿ ತೋರಿಸಲಿ ಎಂದು ಸವಾಲು ಹಾಕಿದರು. ಅಷ್ಟೇ ಅಲ್ಲ ಕೇಂದ್ರದ ಯುಪಿಎ ಸರಕಾರ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಹೊಟ್ಟೆಯ ಮೇಲೆ ಹೊಡೆದಿದೆ ಎಂದರು.

ಕಾಶ್ಮೀರ ಬಿಟ್ಟು ಕೊಡಲಾರೆವು: ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಜಮ್ಮು-ಕಾಶ್ಮೀರ ನಮ್ಮದು. ಯಾವುದೇ ಕಾರಣಕ್ಕೂ ಜಮ್ಮು-ಕಾಶ್ಮೀರ ಪಾಕಿಸ್ತಾನಕ್ಕೆ ಬಿಟ್ಟು ಕೊಡುವುದಿಲ್ಲ. ನಮ್ಮ ಕೊನೆಯ ಉಸಿರು ಇರುವವರೆಗೂ ಹೋರಾಟ ಮಾಡುವುದಾಗಿ ನಾವು ಶಪಥ ಮಾಡುತ್ತೇವೆ ಎಂದು ಅನಂತ್ ಕುಮಾರ್ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ